ಪ್ಲಾಸ್ಟಿಕ್ ನೀರಿನ ಬಾಟಲಿ ಬದಲು ಇದೀಗ ಮಣ್ಣಿನ ಬಾಟಲಿಗಳು ಜನರನ್ನು ಸೆಳೆಯುತ್ತಿದ್ದು, ಈ ಮೂಲಕ ಬೇಸಿಗೆಯಲ್ಲಿ ಆಕರ್ಷಿಸುವ ಮಡಿಕೆಗಳ ಸಾಲಿಗೆ ಮಣ್ಣಿನ ನೀರಿನ ಬಾಟಲಿಗಳು ಸೇರ್ಪಡೆಯಾಗಿವೆ.
ನಾವು ಮೊದಲಿಂದಲೂ ಮಣ್ಣಿನ ಮಡಿಕೆ ಗಳನ್ನು ಬಳಸುವುದನ್ನು ಕಾಣುತ್ತಾ ಬಂದಿದ್ದೆವೆ. ಆದರೆ ಈಗ ಸ್ವಲ್ಪ ಮುಂದುವರೆದು ಮಣ್ಣಿನ ಬಾಟಲಿಯನ್ನು ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ. ಮಣ್ಣಿನ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸುವುದರಿಂದ ನೈಸರ್ಗಿಕವಾಗಿ ನೀರು ತಂಪಾಗುವಿಕೆಗೆ ಸಹಾಯ ಮಾಡುತ್ತದೆ.

ಬೇಸಿಗೆಯಲ್ಲಿ ಸಾಮಾನ್ಯವಾಗಿ ಮಡಿಕೆಯ ನೀರು ತಂಪು ಹಾಗೂ ಶುದ್ಧ ಎನ್ನುವ ಕಾರಣಕ್ಕೆ ಮಡಿಕೆಯ ನೀರನ್ನು ಕುಡಿಯಲು ಇಷ್ಟ ಪಡುತ್ತಾರೆ. ಇಷ್ಟು ವರ್ಷ ಕಾಲ ಮಡಿಕೆಗೆ ಸೀಮಿತವಾಗಿದ್ದು, ಇದೀಗ ಅದೇ ಬಾಟಲಿ ರೂಪ ಪಡೆದುಕೊಂಡಿದೆ, ಈ ಮೂಲಕ ಪ್ಲಾಸ್ಟಿಕ್ ಬಾಟಲಿಗೆ ಪರಾರಯಯ ಮಾರ್ಗವಾಗಿ ಮಣ್ಣಿನ ಬಾಟಲಿಗಳು ಸಿದ್ಧವಾಗಿವೆ. ಕೆಲವು ಎನ್‌ಜಿಒಗಳು ಪ್ಲಾಸ್ಟಿಕ್ ಬಾಟಲ್‌ಗಳ ಬದಲು ಮಣ್ಣಿನ ಬಾಟಲಿ ಬಳಸಿ ಎನ್ನುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಮಣ್ಣಿನ ಬಾಟಲಿಗಳಿಂದ ಆಗುವ ಆರೋಗ್ಯ ಉಪಯೋಗಗಳ ಬಗ್ಗೆ ತಿಳಿ ಹೇಳಲಾಗುತ್ತಿದೆ. ಬಡ ಮಹಿಳೆಯರಿಗೆ ಈ ಮೂಲಕ ಸ್ವ ಉದ್ಯೋಗ ಕೂಡ ಕಲ್ಪಿಸಲಾಗುತ್ತಿದೆ.
“ಮಣ್ಣಿನ ಬಾಟಲಿ, ಮಡಿಕೆಗಳ ಉಪಯೋಗಳು”
“ಕಡಿಮೆ ಪ್ಲಾಸ್ಟಿಕ್ ಬಳಕೆ :” ಮಣ್ಣಿನ ಮಡಿಕೆ ಅಥವಾ ಬಾಟಲಿಗಳನ್ನು ಬಳಸುವುದರಿಂದ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ಕಡಿಮೆ ಆಗುತ್ತದೆ ಇದರಿಂದ ಪ್ಲಾಸ್ಟಿಕ್ ಮಾಲಿನ್ಯ ತಡೆಯಲು ಸಹಾಯ ಮಾಡುತ್ತದೆ.
“ರಾಸಾಯನಿಕ ಮುಕ್ತ:” ಪ್ಲಾಸ್ಟಿಕ್ ಬಾಟಲಿಗಳು ನೀರಿನಲ್ಲಿ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡವುದುರಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಪರಿಸರಕ್ಕೂ ಇದು ಮಾರಕವಾಗಿದೆ. ಆದ್ದರಿಂದ ಮಣ್ಣಿನ ಪಾತ್ರೆಗಳನ್ನು ಬಳಸಿವುದರಿಂದ ಈ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತದೆ.
“ನೈಸರ್ಗಿಕ ತಂಪು:” ಮಣ್ಣಿನ ಮಡಿಕೆಗಳು ನೀರನ್ನು ನೈಸರ್ಗಿಕವಾಗಿ ತಂಪಾಗಿಡುತ್ತವೆ. ಆದ್ದರಿಂದ ಕೃತಕವಾದ ಅಥವಾ ಫ್ರಿಡ್ಜ್ ಗಳಂತಹ ವಸ್ತುಗಳನ್ನು ಬಳಸುವ ಅವಶ್ಯಕತೆ ಇರುವುದಿಲ್ಲ ಹಾಗೂ ಆರೋಗ್ಯದ ದೃಷ್ಠಿಯಿಂದಲೂ ಇದು ಸೂಕ್ತವಾಗಿದೆ.
“ಕಲ್ಮಷಗಳ ನಿವಾರಣೆ:” ಮಣ್ಣಿನ ಪಾತ್ರೆಯ ಚಿಕ್ಕ ರಂಧ್ರಗಳು ಕಲ್ಮಷಗಳನ್ನು ಹೀರಿಕೊಂಡು ನೀರನ್ನು ಶುದ್ಧೀಕರಿಸುತ್ತದೆ ಆದ್ದರಿಂದ ಆರೋಗ್ಯಗಳನ್ನು ಕಾಪಡಿಕೊಳ್ಳಬಹುದಾಗಿದೆ.

ಪರಿಸರ ಹಾಗೂ ಆರೋಗ್ಯ ಕಾಳಜಿಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅದರಲ್ಲೂ ಮಡಿಕೆಗಳು ಅಡುಗೆ ಮನೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಳ್ಳಲು ಸಜ್ಜಾಗುತ್ತಿವೆ. ಸದ್ಯ ಮಣ್ಣಿನ ನೀರಿನ ಬಾಟಲಿಗಳು ಜನರನ್ನು ಆಕರ್ಷಿಸುತ್ತಿವೆ.