ಬೆಂಗಳೂರು : ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ ಎಂಬ ವದಂತಿ ಹಿನ್ನೆಲೆ ಜನರ ಆತಂಕ ದೂರು ಮಾಡೋಕೆ ಆರೋಗ್ಯ ಇಲಾಖೆ ಮುಂದಾಗಿದೆ.
ಕಳೆದ ಕೆಲವು ದಿನಗಳಿಂದ ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆ ಅನ್ನೋ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಜನ ಮೊಟ್ಟೆ ತಿನ್ನೋದಕ್ಕೂ ಭಯ ಪಡುತಿದ್ದಾರೆ. ಇದೀಗ ಜನರ ಆತಂಕ ದೂರು ಮಾಡೋದಕ್ಕೆ ಆರೋಗ್ಯ ಮತ್ತು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ರಾಜ್ಯದಲ್ಲಿ ಮೊಟ್ಟೆ ಟೆಸ್ಟ್ ಮಾಡೋದಕ್ಕೆ ಸೂಚನೆ ಕೊಟ್ಟಿದ್ದಾರೆ. ಜನ ಆತಂಕಕ್ಕೆ ಒಳಗಾಗೋದು ಬೇಡ ಎಲ್ಲಾ ಬ್ರ್ಯಾಂಡ್‌ಗಳನ್ನ ಟೆಸ್ಟ್ ಮಾಡೋಕೆ ಹೇಳ್ತೆನೆ ಎಂದು ಹೇಳಿದ್ದಾರೆ.
6 ತಿಂಗಳ ಹಿಂದಿನ ವರದಿಯಲ್ಲಿ ಏನಿತ್ತು?
ಪ್ರಮುಖವಾಗಿ ಮೊಟ್ಟೆ ವದಂತಿ ವಿಚಾರ ಚರ್ಚೆಯಲ್ಲಿ ಇರುವ ಬೆನ್ನಲ್ಲೇ ರಾಜ್ಯ ಆಹಾರ ಸುರಕ್ಷತಾ ಇಲಾಖೆ ವತಿಯಿಂದ ಮಹತ್ವದ ವಿಚಾರ ಬಯಲಾಗಿದೆ. ಕಳೆದ 6 ತಿಂಗಳ ಹಿಂದೆ ಮೊಟ್ಟೆ ಟೆಸ್ಟ್ ಆಗಿದ್ದು, ಅದರಲ್ಲಿ ಮೊಟ್ಟೆಯಲ್ಲಿ ಯಾವುದೇ ಹಾನಿಕಾರಕ ಇಲ್ಲ ಅಂತಾ ವರದಿ ಬಂದಿತ್ತು.
ಒಟ್ಟಾರೆ ಮೊಟ್ಟೆ ಸೇಫ್ ಅಂತಾ ವರದಿ ಇದೆ ಅಂತಾ ಆಹಾರ ಸುರಕ್ಷತಾ ಇಲಾಖೆ ಹೇಳ್ತಿದೆ. ಇತ್ತ ಆರೋಗ್ಯ ಸಚಿವರು ಮೊಟ್ಟೆ ಟೆಸ್ಟ್ ಗೆ ಸೂಚನೆ ನೀಡಿದ್ದಾರೆ. ಆತಂಕದಲ್ಲಿ ಇರುವ ಜನರಿಗೆ ಆರೋಗ್ಯ ಇಲಾಖೆ ಮತ್ತು ಆಹಾರ ಸುರಕ್ಷತಾ ಇಲಾಖೆಯ ಲ್ಯಾಬ್ ರಿಪೋರ್ಟ್ ಏನಾಗಿರಲಿದೆ ಎಂಬುದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ : ಕಮ್ಮಿ ಬೆಲೆಗೆ ಚಿನ್ನದ ನಾಣ್ಯ ಕೊಡ್ತೀವಿ ಎಂದು ಲಕ್ಷ ಲಕ್ಷ ವಂಚನೆ | ಇಬ್ಬರ ಬಂಧನ



















