ಮೈಸೂರು: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಅವರು ವಿಶ್ವವಿಖ್ಯಾತ ಮೈಸೂರು ದಸರಾದ ಅಧಿಕೃತ ಆಹ್ವಾನ ನೀಡಿದ್ದಾರೆ.
ಸೆ.22 ರಂದು ಪ್ರಾರಂಭವಾಗಲಿರುವ ನಾಡಹಬ್ಬ ದಸರಾಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ಗೆ ಅವರಿಗೆ ಗೌರವ ಧನ ನೀಡಿ ಆಹ್ವಾನ ನೀಡಿದ್ದಾರೆ.
ಈ ವೇಳೆ ಮಾತನಾಡಿ ಸಚಿವರು, ದಸರಾಗೆ ಯಾವತ್ತೂ ಯದುವಂಶದಿಂದ ಕಿರಿಕಿರಿ ಆಗಿಲ್ಲ. ಪ್ರತಿ ದಸರಾಗೂ ಯದುವಂಶದ ಸಹಕಾರ ಇರುತ್ತದೆ. ಈ ಬಾರಿಯ ದಸರಾಗೂ ಉತ್ತಮ ಸಹಕಾರ ನೀಡುತ್ತೇವೆ ಎಂದು ಪ್ರಮೋದಾ ದೇವಿ ಒಡೆಯರ್ ಹೇಳಿದ್ದಾರೆ. ಕಳೆದ ಬಾರಿ ಆದ ಒಂದೆರಡು ಗೊಂದಲಗಳ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಪ್ರಮೋದಾ ದೇವಿ ಒಡೆಯರ್ ತಂದಿದ್ದಾರೆ. ಕೆಲ ಸಲಹೆ ಕೂಡ ಕೊಟ್ಟಿದ್ದು ಅವರ ಸಲಹೆ ಸ್ವೀಕರಿಸಿದ್ದೇವೆ ಎಂದಿದ್ದಾರೆ.
ಬಾನು ಮುಷ್ತಾಕ್ ಅವರಿಂದ ದಸರಾವನ್ನು ಉದ್ಘಾಟಿಸುತ್ತಿರುವ ಬಗ್ಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಯದುವಂಶಕ್ಕೆ ದಸರಾದ ಆಹ್ವಾನ ನೀಡಿದ್ದಾರೆ



















