ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೆ ನಕಲಿ ಹಾವಳಿ ಹೆಚ್ಚಾಗುತ್ತಿದೆ. ಅಂತೆಯೇ ಯಶವಂತಪುರದ ಪೋರ್ ಕೆ ಶೂಸ್ ಶಾಪ್ ಗ್ರಾಹಕರಿಗೆ ಬ್ರ್ಯಾಂಡೆಡ್ ಹೆಸರಲ್ಲಿ ಟೋಪಿ ಹಾಕುತ್ತಿದ್ದ ಘಟನೆ ಬಯಲಿಗೆ ಬಂದಿದೆ.
ಇದೀಗ ಪೋರ್ ಕೆ ಶೂಸ್ ಗೋಡೌನ್ ಮೇಲೆ ಪೊಲೀಸರ ದಾಳಿ ಮಾಡಿದ್ದು, ಮೊಹಮ್ಮದ್ ಇಮ್ರಾನ್ ಎಂಬಾತನನ್ನು ಬಂಧಿಸಿದ್ದಾರೆ. ಹದಿನೈದು ಲಕ್ಷಕ್ಕೂ ಅಧಿಕ ಮೌಲ್ಯದ ನಕಲಿ ಬ್ರ್ಯಾಂಡೆಡ್ ಶೂ ಚಪ್ಪಲಿ ಸೀಜ್ ಆಗಿದ್ದು, ಪ್ರತಿಷ್ಟಿತ ಬ್ರ್ಯಾಂಡೆಡ್‌ಗಳಾದ ಕ್ರಾಕ್ಸ್, ನೈಕಿ, ಪೊಲೋ, ರಾಲ್ಪ್ ಲಾರೆನ್ಸ್ ಬ್ರ್ಯಾಂಡ್‌ನ ನಕಲಿ ಚಪ್ಪಲಿ ಶೂಗಳು ಪೋಲಿಸರ ವಶಕ್ಕೆ ಪಡೆದಿದ್ದಾರೆ.
ಇನ್ನು ಪೋಲಿಸರ ತನಿಖೆ ವೇಳೆ ಪಂಜಾಬ್‌ನ ಲೂಧಿಯಾನದಿಂದ ಬೆಂಗಳೂರಿಗೆ ನಕಲಿ ಐಟಂಸ್ ಬರುತ್ತಿದ್ದದ್ದು ಬೆಳಕಿಗೆ ಬಂದಿದೆ. 50%, 60% ಆಫರ್ ಎಂದು ಗ್ರಾಹಕರಿಗೆ ಯಾಮಾರಿಸುತ್ತಿದ್ದು, ಐದು ಸಾವಿರದ ಶೂ ಐನೂರು ರೂ. ಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.