ಬೆಂಗಳೂರು: ಇಂದು ಹಾಸನದ ಹಾರ್ಟ್ ಅಟ್ಯಾಕ್ ಸರ್ಕಾರದ ಕೈ ಸೇರಲಿದೆ.
ಹಾಸನದಲ್ಲಿ ಸರಣಿ ಹೃದಯಾಘಾತದ ಬಗ್ಗೆ ಈಗಾಗಲೇ ತಜ್ಞರು ವರದಿ ಸಿದ್ಧಪಡಿಸಿದ್ದಾರೆ. ತಜ್ಞರು ಒಟ್ಟು 23 ಜನರ ಸಾವಿನ ರಹಸ್ಯ ಬಯಲು ಮಾಡಿದ್ದಾರೆ. ಡಾ. ಕೆ.ಎಸ್. ರವೀಂದ್ರನಾಥ್ ಅವರ ನೇತೃತ್ವದ ಟೆಕ್ನಿಕಲ್ ಟೀಂ ವರದಿ ಸಿದ್ಧಪಡಿಸಿದೆ.
ಹಾಸನದಲ್ಲಿ ಹಾರ್ಟ್ ಅಟ್ಯಾಕ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರಣಿ ಸಾವಿಗೆ ಕಾರಣ ಪತ್ತೆ ಹಚ್ಚುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಟೆಕ್ನಿಕಲ್ ಟೀಂ ಸಿದ್ಧಪಡಿಸಿತ್ತು. 10 ಜನ ತಜ್ಞರನ್ನೊಳಗೊಂಡ ತಂಡ ಸಂಪೂರ್ಣ ಮಾಹಿತಿ ಕಲೆ ಹಾಕಿ. ಹಾರ್ಟ್ ಅಟ್ಯಾಕ್ ಪ್ರಕರಣಗಳ ಹಿಂದಿನ ಮಾಹಿತಿಯನ್ನು ಕಲೆ ಹಾಕಿವೆ. 50 ಪ್ರಶ್ನೆಗಳನ್ನು ಆಧಾರವಾಗಿಟ್ಟುಕೊಂಡು ವರದಿ ಸಿದ್ದ ಮಾಡಿವೆ.
ಹಾರ್ಟ್ ಅಟ್ಯಾಕ್ ಸರಣಿ ಎಂಬಂತೆ ಆಗಿದ್ದರೂ ಕೇವಲ ಮೂರ್ನಾಲ್ಕು ಜನರಿಗೆ ಮಾತ್ರ ಪೋಸ್ಟ್ ಮಾರ್ಟಂ ಆಗಿತ್ತು. ಹೀಗಾಗಿ ಇನ್ನುಳಿದವರ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಾಗಿದೆ. ಸದ್ಯ ವರದಿ ಸಿದ್ಧವಾಗಿದ್ದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ತಜ್ಞರು ವರದಿ ಸಲ್ಲಿಸಲಿದ್ದಾರೆ.