ಹಾಸನ: ಬೇಲೂರು ಪಟ್ಟಣದ ಗಾಣಿಗರ ಬೀದಿಯ ಮನೆಯೊಂದರಲ್ಲಿ ನಗ್ನ ಸ್ಥಿತಿಯಲ್ಲಿ ಮಹಿಳೆಯ ಒಂಟಿ ಶವ ಪತ್ತೆಯಾಗಿದೆ.
ಮೃತ ಮಹಿಳೆಯನ್ನು ಚಿಕ್ಕಮಗಳೂರಿನಮಲ್ಲೇನಹಳ್ಳಿ ಗ್ರಾಮದ ಸ್ಪಂದನ (34) ಎಂದು ಗುರುತಿಸಲಾಗಿದೆ. ಮಹಿಳೆ ಪತಿಯಿಂದ ದೂರಾಗಿ 8 ದಿನಗಳ ಹಿಂದೆ ಬೇಲೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಎರಡು ದಿನಗಳಿಂದ ಮನೆಯಲ್ಲಿ ಯಾರೂ ಇಲ್ಲದ್ದನ್ನ ಸ್ಥಳೀಯರು ಗಮನಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಬಾಗಿಲು ತೆರೆದಿದ್ದರೂ ಯಾರ ಸುಳಿವು ಇಲ್ಲದೇ ಇದ್ದಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಸ್ಪಂದನ ಮೃತದೇಹ ಪತ್ತೆಯಾಗಿದೆ.
ಮೃತದೇಹ ಕಂಡಾಗ ಕೊಲೆ ಶಂಕೆ ಅನ್ನಿಸುತ್ತದೆ. ಈ ಹಿನ್ನೆಲೆಯಲ್ಲಿ ಬೇಲೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸ್ಥಳದಲ್ಲಿ ಶ್ವಾನದಳ, ಸೋಕೊ ಟೀಂ ಪರಿಶೀಲನೆ ನಡೆಸಿದೆ.
ಇದನ್ನೂ ಓದಿ : “ಕಳಪೆ ವಾತಾವರಣದಿಂದಲೇ ಕೊಹ್ಲಿ, ರೋಹಿತ್ ಟೆಸ್ಟ್ ನಿವೃತ್ತಿ”: ಮನೋಜ್ ತಿವಾರಿ ಹೇಳಿಕೆ!



















