ಹಾಸನ : ಚಲಿಸುತ್ತಿದ್ದ ಆಟೋ ಮೇಲೆ ಕಾಡುಕೋಣ ದಾಳಿ ಮಾಡಿದ ಪರಿಣಾಮ ಆಟೋದಲ್ಲಿದ್ದ ಇಬ್ಬರಿಗೆ ಗಾಯವಾಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಬಳಿ ನಡೆದಿದೆ.
ಮಹಮದ್ ಅಲಿ ಎಂಬುವವರಿಗೆ ಸೇರಿದ KA-46-7121 ನಂಬರ್‌ನ ಆಟೋ ಇದಾಗಿದ್ದು, ಮಲಸಾವರ ರಸ್ತೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾಗ ಏಕಾಏಕಿ ಬಂದ ಎರಡು ಕಾಡುಕೋಣಗಳಲ್ಲಿ ಒಂದು ಕೋಣ ದಾಳಿ ಮಾಡಿದೆ. ಈ ವೇಳೆ ಪಕ್ಕದಲ್ಲಿ ಹಾಕಿದ್ದ ತಂತಿ ಬೇಲಿ ದಾಟಿ ಆಟೋ ವಾಲಿದೆ.
ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಯಾಣಿಸುತ್ತಿದ್ದ ಮಹಿಳೆಗೂ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಘಟನೆ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಚಾ.ನಗರದಲ್ಲಿ ವ್ಯಕ್ತಿಯ ಮೇಲೆ ಚಿರತೆ ದಾಳಿ | ಧೈರ್ಯದಿಂದ ಪ್ರತಿರೋಧ ತೋರಿ ಪ್ರಾಣಾಪಾಯದಿಂದ ಪಾರು!



















