ಹಾಸನ : ಹಾಸನದಲ್ಲಿ ಸರಣಿ ಹೃದಯಾಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ವರದಿ ಸಲ್ಲಿಕೆಗೆ ಕೌಂಟ್ ಡೌನ್ ಶುರುವಾಗಿದೆ.
ಜಯದೇವ ಹೃದ್ರೋಗ ಆಸ್ಪತ್ರೆಯ ಡಾ. ರವೀಂದ್ರನಾಥ್ ಅವರೊಂದಿಗೆ ನಾಳೆ ಸಮಿತಿ ವರದಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಹಾಸನದ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಶೇ.80ರಷ್ಟು ಅಧ್ಯಯನ ವರದಿ ಪೂರ್ಣಗೊಳಿಸಿದ್ದು, ಇಂದು ಸಂಜೆಯೊಳಗೆ ಅಧ್ಯಯನ ವರದಿ ಪೂರ್ಣಗೊಳಿಸಿ ನಾಳೆ ಅಂತಿಮ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಲಿದೆ.
ಅಂತಿಮ ವರದಿ ಸಲ್ಲಿಕೆಗು ಮುನ್ನ ಡಾ.ರವೀಂದ್ರನಾಥ್ ಸಭೆ ಕರೆದಿದ್ದಾರೆ. ಇಂದು ಹಾಸನ ಡಿಹೆಚ್ಒ, ಡಿಸಿ, ಆರೋಗ್ಯಾಧಿಕಾರಿಗಳು ಹಾಗೂ ವೈದ್ಯರ ಜೊತೆ ಚರ್ಚಿಸಿ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ.