ಬೆಂಗಳೂರು : ಕೋವಿಡ್ ಹೃದಯಾಘಾತದ ವರದಿ ಆಯ್ತು. ಇದೀಗ ಹಾಸನದ ವರದಿಗೆ ಕೌಂಟ್ ಡೌನ್ ಶರುವಾಗಿದೆ. ಹಾಸನದಲ್ಲಿ ಹೃದಯಾಘಾತಕ್ಕೆ ಬಲಿಯಾಗ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣುತ್ತಿದೆ.
ಕೋವಿಡ್ ವ್ಯಾಕ್ಸಿನ್ ಕಾರಣದಿಂದ ಹೃದಯಾಘಾತವಾಗುತ್ತಿಲ್ಲ ಎಂದು ಇತ್ತೀಚೆಗೆ ಅಧ್ಯಯನ ವರದಿ ಬಂದ ಬೆನ್ನಲ್ಲೇ ಇದೀಗ ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕಾರಣ ತಿಳಿಯಲು ಅಧ್ಯಯನಕ್ಕೆ ಸಮಿತಿ ರಚನೆ ಮಾಡಲಾಗಿದೆ. ಜುಲೈ 10 ರಂದು ಅಧ್ಯಯನದ ವರದಿಯನ್ನು ಸಮಿತಿ ಸರ್ಕಾರಕ್ಕೆ ಸಲ್ಲಿಸಲಿದೆ.
ಜಯದೇವ ಆಸ್ಪತ್ರೆ ನಿರ್ದೇಶಕ ಡಾ ರವೀಂದ್ರನಾಥ್ ನೇತೃತ್ವದ ಸಮಿತಿಯಿಂದ ಅಧ್ಯಯನ ಕೈಗೊಳ್ಳಲಾಗುತ್ತಿದ್ದು, ಆರೋಗ್ಯಾಧಿಕಾರಿಳು ಹಾಸನ ಜಿಲ್ಲೆಯ ಪ್ರತೀ ಮನೆಗಳಿಗೆ ತೆರಳಿ ಮಾಹಿತಿ ಪಡೆಯಲಿದ್ದಾರೆ.
ಪ್ರತಿ ತಾಲೂಕಿನ ಮನೆಗಳಿಗೆ ಭೇಟಿ ನೀಡಿ ಹೃದಯಾಘಾತದಿಂದ ಸಾವನ್ನಪ್ಪಿರುವವರ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಹಲವು ಪ್ರಶ್ನೆಗಳಿರುವ ಸಿದ್ಧ ಪ್ರಶ್ನಾವಳಿಗಳ ಬುಕ್ ಲೆಟ್ ನೀಡಿ ಮಾಹಿತಿಯನ್ನು ಅಧಿಕಾರಿಗಳು ಪಡೆಯಲಿದ್ದಾರೆ.
ಹಾಸನ ಜಿಲ್ಲೆ ಹೃದಯಾಘಾತ ಪ್ರಕರಣವನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಸರ್ಕಾರ, 50 ಪ್ರಶ್ನೆಗಳುಳ್ಳ ಬುಕ್ ಲೆಟ್ ನೀಡಿ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ತುರ್ತಾಗಿ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ಸರ್ಕಾರ ಸೂಚನೆ ನೀಡಿದ್ದು, ಇದೇ ಜು.10ರಂದು ಸರ್ಕಾರಕ್ಕೆ ವರದಿಯನ್ನು ಸಮಿತಿ ಒಪ್ಪಿಸಲಿದೆ.
ವರದಿ ಅಧ್ಯಯನಕ್ಕೆ ಇರುವ ಪ್ರಶ್ನೆಗಳೇನು..?
- ಹೃದಯಾಘಾತಕ್ಕೊಳಗಾದ ವ್ಯಕ್ತಿಯ ವಿವರ
- ಈ ಹಿಂದೆ ಯಾವುದಾದರೂ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರಾ?
- ಡಿಪ್ರೆಶನ್, ಒಬೆಸಿಟಿ, ಥೈರಾಯ್ಡ್, ಪಿಸಿಒಡಿ, ಹೈಪರ್ ಟೆನ್ಶನ್ ಇತ್ಯಾದಿ?
- ಕೋವಿಡ್ ಅಟ್ಯಾಕ್ ಆಗಿತ್ತಾ?
- ವ್ಯಕ್ತಿಯ ತೂಕ ಎಷ್ಟಿತ್ತು?
- ಕೋವಿಡ್ ವ್ಯಾಕ್ಸಿನ್ ಯಾವುದು ಪಡೆಯಲಾಗಿತ್ತು?
- ಫ್ಯಾಮಿಲಿ ಹಿಸ್ಟರಿ ಬಗ್ಗೆ
- ವ್ಯಕ್ತಿಯ ಲೈಫ್ ಸ್ಟೈಲ್
- CPR ಮಾಡಲಾಗಿತ್ತಾ?
- ಯಾವ ಆಸ್ಪಯಲ್ಲಿ ಚಿಕಿತ್ಸೆ ನೀಡಲಾಗಿತ್ತು ?
ಎಂಬೆಲ್ಲಾ ಪ್ರಶ್ನೆಗಳನ್ನು ಆಧರಿಸಿ ಸಮಿತಿ ಮಾಹಿತಿಯನ್ನು ಕಲೆಹಾಕಿ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.



















