ಹಾಸನ : ಎರಡನೇ ಮದುವೆಯಾಗಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಪತ್ನಿಯನ್ನೇ ಪತಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನದ ಆಲೂರು ತಾಲ್ಲೂಕಿನ ಯಡೂರು ಗ್ರಾಮದಲ್ಲಿ ನಡೆದಿದೆ.
ಪತ್ನಿ ರಾಧಳನ್ನ(40) ಕೊಲೆಯಾದ ಮಹಿಳೆ. ಜ. 10ರ ರಾತ್ರಿ ಪತಿ ಕುಮಾರ್, ಪತ್ನಿ ಹತ್ಯೆ ಮಾಡಿ ಯಗಚಿ ನದಿಗೆ ಎಸೆದಿದ್ದಾನೆ ಎನ್ನಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಪತಿಯಿಂದ ಬೇರೆ ವಾಸವಾಗಿದ್ದ ರಾಧ. ಜನವರಿ ಮೊದಲ ವಾರ ಶಬರಿಮಲೆಗೆ ತೆರಳಲಿದ್ದ ಕುಮಾರ್‌ಗೆ ಇರುಮುಡಿ ಕಟ್ಟೋ ವೇಳೆ ಪತ್ನಿ ಸ್ಥಾನದಲ್ಲಿ ಬೇರೊಬ್ಬ ಮಹಿಳೆ ಪೂಜೆ ಮಾಡಿದ ಬಗ್ಗೆ ರಾಧಾ ಪ್ರಶ್ನೆ ಮಾಡಿದ್ದಕ್ಕೆ ಶಬರಿಮಲೆಯಿಂದ ಪತಿ ಶನಿವಾರ ಬಂದಿದ್ದು, ಅದೇ ರಾತ್ರಿ ಕೊಲೆ ಮಾಡಿ ಪತಿ ಹಾಗೂ ಆತನ ಮನೆಯವರು ಸೇರಿ ನದಿಗೆ ಎಸೆದಿದ್ದಾರೆ ಎಂದು ರಾಧಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಸದ್ಯ ಪೊಲೀಸರು ಕುಮಾರ್‌ನನ್ನು ಬಂಧಿಸಿದ್ದಾರೆ. ಈ ಘಟನೆ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಹಾಸನ | ಕಾಡಾನೆ ದಾಳಿಗೆ ಮಹಿಳೆ ಬಲಿ



















