ಹಾಸನ : ಇಳಿ ವಯಸ್ಸಿನಲ್ಲಿ ಎರಡನೇ ಮದುವೆಯಾದ ತಂದೆಗೆ ಮಕ್ಕಳು ಹಲ್ಲೆಗೈದು ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಈ ಬೆನ್ನಲ್ಲೇ ಮಕ್ಕಳು ಆಸ್ತಿಗಾಗಿ ನನ್ನ ಮೇಲೆ ಹಲ್ಲೆಗೈದು ದೂರು ನೀಡಿದ್ದಾರೆ ಎಂದು ತಂದೆ ಆರೋಪಿಸಿದ್ದಾರೆ.
ಡಿ.17 ರಂದು ಹೊಳೆನರಸೀಪುರ ತಾಲ್ಲೂಕಿನ, ಮಾವಿನಕೆರೆ ಬೆಟ್ಟದಲ್ಲಿ ಗೀತಾ (58) ಜೊತೆ ರಾಜಣ್ಣ (68) ಎರಡನೇ ವಿವಾಹವಾಗಿದ್ದಾರೆ. ಪತಿಯಿಂದ ದೂರವಾಗಿರುವ ಗೀತಾ ತನ್ನ ಮಕ್ಕಳಿಗೆ ವಿವಾಹ ಮಾಡಿದ್ದಾರೆ. ಇದೀಗ ರಾಜಣ್ಣನೊಂದಿಗೆ ಮತ್ತೊಂದು ವಿವಾಹವಾಗಿದ್ದಾರೆ.
ಇಬ್ಬರು ಹೆಣ್ಣುಮಕ್ಕಳು, ಓರ್ವ ಪುತ್ರನಿಗೆ ಮದುವೆ ಮಾಡಿ ಆಸ್ತಿ ನೀಡಿದ್ದೇನೆ. ನನ್ನ ಬಳಿ ಒಂದು ಮನೆಯಿದ್ದು ಅದನ್ನು ತಮಗೆ ನೀಡುವಂತೆ ನನ್ನ ಮಕ್ಕಳು ಹಲ್ಲೆ ನಡೆಸಿದ್ದಾರೆ. ನನ್ನ ಕಷ್ಟ-ಸುಖಕ್ಕೆ ನೆರವಾಗಲಿ ಎಂದು ಎರಡನೇ ವಿವಾಹ ಆಗಿದ್ದೇನೆ. ಸೂಕ್ತ ರಕ್ಷಣೆ ನೀಡುವಂತೆ ರಾಜಣ್ಣ-ಗೀತಾ ದಂಪತಿ ವಿಡೀಯೋ ಮುಖಾಂತರ ಮನವಿ ಮಾಡಿದ್ದಾರೆ.
ಇದೀಗ ರಾಜಣ್ಣ ತನ್ನ ಮಕ್ಕಳು ಆಸ್ತಿಗಾಗಿ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ. ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಜಣ್ಣ ದಂಪತಿ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ : ‘ರಾಷ್ಟ್ರೀಯ ಪಲ್ಸ್ ಪೋಲಿಯೋ’ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ



















