ಹಾಸನ : ಕನ್ನಡದ ಹೆಮ್ಮೆಯ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ಇಂದು, ಹಾಸನದಲ್ಲಿರುವ ಹಾಸನಾಂಬಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಅಲ್ಲಿ ಪೂಜೆಯಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದಿದ್ದಾರೆ.
‘ಕಾಂತಾರ 1’ ಚಿತ್ರದ ಅಭೂತಪೂರ್ವ ಯಶಸ್ಸಿಗೆ ಕೃತಜ್ಞತೆ ಸಲ್ಲಿಸುತ್ತಿರುವ ನಟ ರಿಷಬ್ ಶೆಟ್ಟಿಯವರು ಕರ್ನಾಟಕದಲ್ಲಿ, ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ, ಬಿಹಾರದ ಮುಂಡೇಶ್ವರಿ ದೇವಸ್ಥಾನ, ಕಾಶಿ ವಿಶ್ವನಾಥ ದೇವಾಲಯ, ರಾಮೇಶ್ವರ ಸೇರಿದಂತೆ ಭಾರತದ ಹಲವು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಕಾಂತಾರ ಯಶಸ್ಸನಲ್ಲಿ ದೇವರು-ದೈವಗಳ ಬಲವಾದ ಆಶೀರ್ವಾದವಿದೆ ಎಂಬುದು ನಂಬಿರುವ ರಿಷಬ್ ಶೆಟ್ಟಿಯವರು ಇಂದು ಹಾಸನಾಂಬಾ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದಾರೆ.
ಇತ್ತೀಚೆಗಷ್ಟೇ ರಿಷಬ್ ಶೆಟ್ಟಿಯವರು ಮೈಸೂರಿನ ಚಾಮುಂಡೇಶ್ವರಿ ದೇವಿಯ ಸನ್ನಿಧಿಗೆ ಹೋಗಿ ನಮಿಸಿ, ತಮಗೆ ಹಾಗೂ ಕಾಂತಾರ ಸಿನಿಮಾ ತಂಡಕ್ಕೆ ಸಿಕ್ಕ ಯಶಸ್ಸಿಗೆ ದೇವಿ ಮುಂದೆ ತಲೆಬಾಗಿ ನಮಸ್ಕರಿಸಿ ಬಂದಿದ್ದಾರೆ. ಇದೀಗ, ಹಾಸನಾಂಬೆಗೆ ತಲೆಬಾಗಿ ಬಂದಿದ್ದಾರೆ.