ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕೊಟ್ಟ ಭರವಸೆಗಳಲ್ಲಿ ಒಂದನ್ನಾದರೂ ಈಡೇರಿಸಿದ್ದಾರಾ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ದೇಶದ ಪ್ರತಿಯೊಬ್ಬ ವ್ಯಕ್ತಿ 15 ಲಕ್ಷ ಕೊಡುತ್ತೇನೆ ಅಂದಿದ್ದರು. ಅದನ್ನು ಕೊಟ್ಟರಾ? 2 ಕೋಟಿ ಉದ್ಯೋಗ ನೀಡುತ್ತೇನೆ ಅಂದಿದ್ದರು. ಅದನ್ನು ಮಾಡಿದರಾ? ರೈತರಿಗೆ ಎಂಎಸ್‌ಪಿ ದರ ನಿಗದಿ ಮಾಡುತ್ತೇವೆ ಅಂದಿದ್ದರು. ಬುಲೆಟ್ ಟ್ರೈನ್ ಬರತ್ತೆ ಅಂತಾ ಬುರುಡೆ ಬಿಟ್ಟರು. ಅವರು ಕೇವಲ ಚುನಾವಣೆಯಲ್ಲಿ ಮಾತ್ರ ಮಾತನಾಡುತ್ತಾರೆ. ಆದರೆ, ಯಾವುದೇ ಅನುಷ್ಠಾನಕ್ಕೆ ಬರುವುದಿಲ್ಲ ಎಂದು ಆರೋಪಿಸಿದ್ದಾರೆ.
ನಮ್ಮ ಗ್ಯಾರಂಟಿಗಳನ್ನು ಬಿಜೆಪಿ ಕಾಪಿ ಮಾಡುತ್ತಿದೆ. ಆದರೆ, ನಾವು ಅವರಂತೆ ಮಾತು ಕೊಟ್ಟು ಹಿಂದೆ ಸರಿಯುವವರಲ್ಲ. ಆ ಮಾತುಗಳನ್ನು ಬಡವರಿಗಾಗಿ ಉಳಿಸಿಕೊಳ್ಳುವವರು. ಕರ್ನಾಟಕ ರಾಜ್ಯದ ಬಜೆಟ್‌ನ್ನು ಸ್ವಲ್ಪ ಓದಬೇಕು. ಸುಮಾರು 52 ಸಾವಿರ ಕೋಟಿ ರೂಪಾಯಿ ಬಜೆಟ್‌ನಲ್ಲಿ 5 ಗ್ಯಾರಂಟಿಗಳಿಗಾಗಿ ಶೇ. 45 ರಷ್ಟು ಖರ್ಚು ಮಾಡಿದ್ದಾರೆ. ಕರ್ನಾಟಕದ ಗ್ಯಾರಂಟಿಗಳನ್ನೇ ಬೇರೆ ಕಡೆ ಕಾಪಿ ಮಾಡುತ್ತಿದ್ದಾರೆ ಬಿಜೆಪಿಯವರು ಎಂದು ಗುಡುಗಿದ್ದಾರೆ.