ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾಗೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ, ಇದೀಗ ಅನಿರುದ್ಧ್ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನಲಾಗುತ್ತಿದೆ.
ಟಾಕ್ಸಿಕ್ ಸಿನಿಮಾ ಬಗ್ಗೆ ಒಂದಿಲ್ಲೊಂದು ಅಪ್ಡೇಟ್ ಸಿಗ್ತಾನೆ ಇದೆ. ಮೊದಲು ರವಿ ಬಸ್ರೂರು ಅವರ ಸಂಗೀತಾ ಸಂಯೋಜನೆ ಅಂತ ಹೆಸರು ಘೋಷಣೆಯಾಗಿತ್ತು. ಆದರೆ ಈಗ ಅನಿರುದ್ಧ್ ಅವರ ಆಯ್ಕೆ ಖಚಿತವಾಗಿದೆ ಎನ್ನಲಾಗುತ್ತಿದೆ.
ಈ ಸಿನಿಮಾ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾಗೆ ಸಂಗೀತ ಸಂಯೋಜಕನ ಆಯ್ಕೆ ಸಂಪೂರ್ಣ ಫೈನಲ್ ಆಗಿದೆ. ಈ ಮೊದಲು ತಮಿಳಿನಲ್ಲಿ ರಿಲೀಸ್ ಆಗಿ ಹಿಟ್ ಆದ ಜೈಲರ್ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟ ಅನಿರುದ್ಧ್ ಹಲವು ಹಿಟ್ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರನ್ನು ಟಾಕ್ಸಿಕ್ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ವಿಚಾರ ತಂಡದ ಕಡೆಯಿಂದ ಖಚಿತವಾಗಲಿ ಎಂದು ಫ್ಯಾನ್ಸ್ ವೈಟ್ ಮಾಡ್ತಿದ್ದಾರೆ. 2026ರ ಮಾರ್ಚ್ 19ರಂದು ಟಾಕ್ಸಿಕ್ ಸಿನಿಮಾ ರಿಲೀಸ್ ಆಗಲಿದೆ.