ದೇಶ ಅದೆಲ್ಲಿಗೆ ಹೊರಟಿದೆ ಎಂಬುವುದು ತಿಳಿಯದಾಗಿದೆ. ಕಾಮುಕರಂತೂ ಮಾನವೀಯತೆ, ಮಾನ, ಮರ್ಯಾದೆಯನ್ನೇ ಬಿಟ್ಟು ನಿಂತಂತೆ ವರ್ತಿಸುತ್ತಿದ್ದಾರೆ. ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇತ್ತೀಚೆಗಷ್ಟೇ ಕೋಲ್ಕಾತ್ತಾದಲ್ಲಿ ಕಾಮುಕನೊಬ್ಬ ಟ್ರೈನಿ ವೈದ್ಯೆಯ ಮೇಲೆ ಭಯಾನಕ ಅತ್ಯಾಚಾರ ನಡೆಸಿ ಹತ್ಯೆ ನಡೆಸಿರುವ ಘಟನೆ ಇಡೀ ದೇಶದ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಧ್ಯೆ ಅಲ್ಲಲ್ಲಿ ನಡೆಯುತ್ತಿರುವ ಅತ್ಯಾಚಾರಗಳು ಜನರನ್ನು ಕಂಗೆಡಿಸಿವೆ. ಈಗ ಕಾಮುಕನೊಬ್ಬ ಕರ್ತವ್ಯದಲ್ಲಿದ್ದ ವೈದ್ಯೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಈತ ವೈದ್ಯೆ ಮುಂದೆ ತನ್ನ ಖಾಸಗಿ ಅಂಗ ಪ್ರದರ್ಶಿಸಿ ಪರಾರಿಯಾಗಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಈ ನಾಚಿಕೆಗೇಡಿನ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ಇಲ್ಲಿನ ಕ್ಲಿನಿಕ್ ಒಂದರ ಒಳಗೆ ಬಂದ ಕಾಮುಕ ವೈದ್ಯೆಯೊಬ್ಬರಿಗೆ ತನ್ನ ಖಾಸಗಿ ಅಂಗ ಪ್ರದರ್ಶಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ದೃಶ್ಯವನ್ನು ವೈದ್ಯೆ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
Mrseeker ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಆತ ವೈದ್ಯೆಯ ಮುಂದೆ ಖಾಸಗಿ ಅಂಗ ಪ್ರದರ್ಶಿಸಿ ಪರಾರಿಯಾಗಿದ್ದಾನೆ. ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಸುರಕ್ಷತೆಯ ಸ್ಥಿತಿ ಹೇಗಾಗಿದೆ ನೋಡಿ ಎಂಬ ಶೀರ್ಷಿಕೆಯನ್ನು ಈ ವಿಡಿಯೋಕ್ಕೆ ಬರೆಯಲಾಗಿದೆ.
ವಿಡಿಯೋದಲ್ಲಿ ಇದ್ದಕ್ಕಿದ್ದಂತೆ ಕ್ಲಿನಿಕ್ ಒಳಗಡೆ ಬಂದ ಕಾಮುಕನೊಬ್ಬ ಪ್ಯಾಂಟ್ ಜಿಪ್ ತೆರೆದು, ವೈದ್ಯೆಯೊಬ್ಬರಿಗೆ ತನ್ನ ಖಾಸಗಿ ಅಂಗ ತೋರಿಸಿದ್ದಾನೆ. ವೈದ್ಯೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಸೈಕಲ್ ಏರಿ ಪರಾರಿಯಾಗಿದ್ದಾನೆ.