ಆಸ್ಟ್ರೇಲಿಯಾ: ಗುರು ಎಂದರೆ ದೇವರಿಗೆ ಸಮಾನ ಅಂತಾರೆ. ಆದರೆ, ಇತ್ತೀಚೆಗೆ ಗುರು -ಶಿಷ್ಯರ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿ ಬಿಟ್ಟಿದೆ. ಇಲ್ಲೊಬ್ಬ ಶಿಕ್ಷಕಿ ಹಸ್ತಮೈಥುನದ ವಿಡಿಯೋ ಕಳುಹಿಸಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದೆ. ಈ ಶಿಕ್ಷಕಿ ತನ್ನ 17 ವರ್ಷದ ವಿದ್ಯಾರ್ಥಿಗೆ ಆಕೆಯ ಹಸ್ತಮೈಥುನದ ವಿಡಿಯೋ ಕಳುಹಿಸಿದ್ದಳು. ಇದಲ್ಲದೆ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದೆ. ವಿಡಿಯೋ ಆಧಾರದ ಮೇಲೆ ಸಿಡ್ನಿ ಪೊಲೀಸರು ಆರೋಪಿ ಶಿಕ್ಷಕಿಯನ್ನು ಬಂಧಿಸಿದ್ದಾರೆ.
ಸಿಡ್ನಿಯಲ್ಲಿನ ಲುರ್ನಿಯಾ ಹೈಸ್ಕೂಲ್ ನ 30 ವರ್ಷದ ಶಿಕ್ಷಕಿ ತೈಲಾ ಬ್ರೈಲಿ ಎಂಬ ಶಿಕ್ಷಕಿಯೇ ಲೈಂಗಿಕ ಕಿರುಕುಳದ ಆರೋಪದಲ್ಲಿ ಅರೆಸ್ಟ್ ಆದವರು. ಸ್ನಾಪ್ ಚಾಟ್ ಮೂಲಕ ಆರಂಭದಲ್ಲಿ ತನ್ನ 17 ವರ್ಷದ ವಿದ್ಯಾರ್ಥಿಗೆ ಮೆಸೇಜ್ ಮಾಡಲು ಆರಂಭಿಸಿದ್ದ ಈ ಶಿಕ್ಷಕಿ, ಸಲುಗೆಯಿಂದ ಮಾತಾಡಿ ತನ್ನ ಬಲೆಗೆ ಬೀಳಿಸಿದ್ದಾಳೆ. ನಂತರ ವಿದ್ಯಾರ್ಥಿಗೆ ನಗ್ನ ಫೋಟೋಗಳನ್ನು ಕಳುಹಿಸುತ್ತಿದ್ದ ಶಿಕ್ಷಕಿ ಒಂದು ದಿನ ತನ್ನ ಮನೆಗೆ ಕರೆಯಿಸಿ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾಳೆ. ನಂತರ ವಿದ್ಯಾರ್ಥಿಯನ್ನು ಆಕೆ ಕರೆದಾಗಲೆಲ್ಲ ಬರುವಂತೆ ಒತ್ತಾಯಿಸಿದ್ದಾಳೆ.
ಮಾನಸಿಕವಾಗಿ ಒತ್ತಡಕ್ಕೆ ಒಳಗಾದ ಬಾಲಕ ಪೋಷಕರಿಗೆ ಎಲ್ಲ ವಿಷಯವನ್ನು ತಿಳಿಸಿದ್ದು, ಪೋಷಕರ ದೂರಿನ ಆಧಾರದ ಮೇಲೆ ಶಿಕ್ಷಕಿ ಮೇಲೆ ಕೇಸು ದಾಖಲಿಸಲಾಗಿದೆ.