ಬೆಂಗಳೂರು: ಅಶ್ಲೀಲ ಮೆಸೇಜ್ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಸಿಡೇದಹಳ್ಳಿ (Sidedahalli)ಯಲ್ಲಿ ನಡೆದಿದೆ. ಮಮತಾ(31) ನೇಣಿಗೆ ಶರಣಾದ ರ್ದುದೈವಿ. ಶಾಲಾ ಸಹಪಾಠಿಗಳಾದ ವಡ್ಡರಹಳ್ಳಿಯ ನಿವಾಸಿ ಅಶೋಕ್ ಹಾಗೂ ಜೆ.ಪಿ.ನಗರದ ಗಣೇಶ್ ಎಂಬುವವರು ಅಶ್ಲೀಲ ಸಂದೇಶ ಕಳುಹಿಸಿ ನಮ್ಮ ಜೊತೆ ಸಹಕರಿಸು ಎಂದು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ, ನೈಟ್ ಔಟ್ ಬರುವಂತೆ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಲಾಗಿದೆ.
ಅಲ್ಲದೇ, ಸಂಸಾರ ಹಾಳು ಮಾಡುತ್ತೇವೆಂದು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದು ಗೃಹಿಣಿ ಮಮತಾ ತನ್ನ ನಿವಾಸದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಲೋಕೇಶ್, ಪತ್ನಿ ಮಮತಾಗೆ ಫೋನ್ ಮಾಡಿದಾಗ ರಿಸೀವ್ ಮಾಡದ ಹಿನ್ನೆಲೆ ಮನೆ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಅಶೋಕ್ ಮತ್ತು ಗಣೇಶ್ ವಿರುದ್ಧ ಲೋಕೇಶ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.