ಲಾಸ್ ಏಂಜಲೀಸ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇಡೀ ಜಗತ್ತು ಈಗ ಅಮೆರಿಕದತ್ತ ನೋಟ ನೆಟ್ಟಿದೆ. ಈ ಮಧ್ಯೆ ಗೆಲುವಿಗಾಗಿ ಡೊನಾಲ್ಡ್ ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ಮಧ್ಯೆ ಜಿದ್ದಾಜಿದ್ದಿ ನಡೆಯುತ್ತಿದೆ. ಈ ವೇಳೆ ಡೊನಾಲ್ಡ್ ಟ್ರಂಪ್ ಪುನರಾಯ್ಕೆಯಾದರೆ ಅಶ್ಲೀಲ ಉದ್ಯಮವನ್ನು ಮುಚ್ಚಲು ಪ್ರಯತ್ನಿಸಬಹುದು ಎಂದು ಪೋರ್ನ್ ಸ್ಟಾರ್ ಗಳು ಅಭಿಯಾನ ಆರಂಭಿಸಿದ್ದಾರೆ.
ಹೀಗಾಗಿ #HandsOffMyPorn ಅಭಿಯಾನ ಪ್ರಾರಂಭಿಸಿದ್ದಾರೆ. ಯುವಕರನ್ನು ಅವರ ವಿರುದ್ಧ ಮತ ಚಲಾಯಿಸುವಂತೆ ಒತ್ತಾಯಿಸಲು ಈ ರೀತಿ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗೆ ಮತ ಚಲಾಯಿಸಬೇಡಿ ಎಂದು ಈ ಅಭಿಯಾನ ನಡೆಸಲಾಗುತ್ತಿದೆ. ಅಶ್ಲೀಲ ತಾರೆ ಸ್ಟಾರ್ಮಿ ಡೇನಿಯಲ್ಸ್ ಅವರೊಂದಿಗಿನ ಸಂಪರ್ಕಕ್ಕಾಗಿ ಟ್ರಂಪ್ ಕುಖ್ಯಾತಿ ಗಳಿಸಿದ್ದರು. ಹೀಗಾಗಿ ಟ್ರಂಪ್ ಈ ಚುನಾವಣೆಯಲ್ಲಿ ಗೆದ್ದರೆ ಅಮೆರಿಕದ ಪೋರ್ನ್ ಉದ್ಯಮದ ಸ್ಥಗಿತಕ್ಕೆ ಕಾರಣವಾಗುತ್ತದೆ ಎಂಬ ಆತಂಕವನ್ನು ನೀಲಿ ಚಿತ್ರ ತಾರೆಯರು ಹೊರ ಹಾಕಿದ್ದಾರೆ. ಹೀಗಾಗಿ, ತಮ್ಮ ಜೀವನೋಪಾಯಕ್ಕಾಗಿ ಅವರು #HandsOffMyPorn ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಜಾಹೀರಾತುಗಳನ್ನು ಕೂಡ ನೀಡಲಾಗುತ್ತಿದೆ.
ಅಮೇರಿಕಾದಲ್ಲಿ ಪೋರ್ನ್ ವೀಕ್ಷಿಸುವ ಜನರು ಇನ್ನು ಮುಂದೆಯೂ ಅದನ್ನು ವೀಕ್ಷಿಸಲು ನವೆಂಬರ್ 5ರಂದು ಮತ ಹಾಕುವಂತೆ ಕೇಳುವ ಜಾಹೀರಾತುಗಳನ್ನು ಪ್ರಸಾರ ಮಾಡಲಾಗುತ್ತಿದೆ. ಆದರೆ, ಟ್ರಂಪ್ ಮಾತ್ರ ಅಶ್ಲೀಲ ಉದ್ಯಮ ಬಂದ್ ಮಾಡುವ ಕುರಿತು ಯಾವುದೇ ಮಾತುಗಳನ್ನು ಹೇಳಿಲ್ಲ. ಆದರೆ, ರಿಪಬ್ಲಿಕನ್ ಪಕ್ಷ “ಅಶ್ಲೀಲತೆಯನ್ನು ಕಾನೂನುಬಾಹಿರಗೊಳಿಸಬೇಕು. ಅದನ್ನು ಉತ್ಪಾದಿಸುವ ಜನರನ್ನು ಜೈಲಿಗೆ ಹಾಕಬೇಕು” ಎಂದು ಹೇಳಿದೆ. ಈ ಅಶ್ಲೀಲತೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.