ಬೈಂದೂರು : ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜ (ರಿ.) ಬೆಂಗಳೂರು ಇವರ ಅಂಗ ಸಂಸ್ಥೆ ಕರ್ನಾಟಕ ರಾಜ್ಯ ವಿಶ್ವಕರ್ಮ ಯುವಕ ಸಮಾಜ (ರಿ.) ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ ಎಚ್ ಸುಶಾಂತ್ ಆಚಾರ್ಯ ಬೈಂದೂರು ಆಯ್ಕೆಗೊಂಡಿದ್ದಾರೆ.
ಅಕ್ಟೊಬರ್ 30ರಂದು ಬೆಂಗಳೂರಿನ ಶೇಷಾದ್ರಿಪುರಂ ವಿಶ್ವಕರ್ಮ ಸಮುದಾಯದ ಭವನದಲ್ಲಿ ನಡೆಯುವ ಕರ್ನಾಟಕ ರಾಜ್ಯ ವಿಶ್ವಕರ್ಮ ಯುವಕ ಸಮಾಜದ ರಾಜ್ಯ ಪದಾಧಿಕಾರಿಗಳ ಹಾಗೂ ಜಿಲ್ಲಾಧ್ಯಕ್ಷರಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕೃತ ಪತ್ರ ನೀಡಲಾಗುವುದು ಎಂದು ಸಂಘಟನೆಯವರು ತಿಳಿಸಿದ್ದಾರೆ.