ಧಾರವಾಡ : ಗುರುಪೂರ್ಣಿಮೆಯ ಅಂಗವಾಗಿ ತಾಲೂಕಿನ ಅಮ್ಮಿನಬಾವಿ ಗ್ರಾಮದ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದ ಸಕಲ ಸದ್ಭಕ್ತರು ಉಭಯ ಶಿವಾಚಾರ್ಯರಿಗೆ ಗೌರವಾರ್ಪಣೆ ಮಾಡಿ ಆಶೀರ್ವಾದ ಪಡೆದರು.
ಅಮ್ಮಿನಬಾವಿ ಗ್ರಾಮದ ವಿವಿಧ ಓಣಿಗಳ ಭಕ್ತರಲ್ಲದೇ ಹುಬ್ಬಳ್ಳಿ, ಧಾರವಾಡ, ಮರೇವಾಡ, ಕರಡಿಗುಡ್ಡ ಮತ್ತು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟೆ ತಾಲೂಕಿನ ದುಂಡಗಿ ಗ್ರಾಮದ ನೂರಾರು ಜನ ಸದ್ಭಕ್ತರು ಮಠಕ್ಕೆ ಆಗಮಿಸಿ ಉಭಯ ಶ್ರೀಗಳಿಗೆ ಗುರುಪೂರ್ಣಿಮೆಯ ಗೌರವ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.



















