ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳು ಬಡವರ ಸುರಕ್ಷತೆ ಹಾಗೂ ಕಲ್ಯಾಣ ಕೃತಿ ಬಿಡುಗಡೆ ಮಾಡಿದ್ದಾರೆ.
ಇಲ್ಲಿಯ ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡುವಾಗ ಹಲವಾರು ವಿರೋಧಿಗಳು ಟೀಕಿಸಿದರು. ತಮಾಷೆ ಮಾಡಿದರು. ಅವಹೇಳನ ಮಾಡಿದರು. ಆದರೂ ನಾವು ಜನರಿಗಾಗಿ ಯೋಜನೆಗಳನ್ನು ಜಾರಿಗೆ ತಂದೇವು. ಆದರೆ, ಇದರಿಂದ ಜನರಿಗೆ ತುಂಬಾ ಅನುಕೂಲವಾಯಿತು. ಬಡವರ ಬದುಕಿಗೆ ಗ್ಯಾರಂಟಿ ಆಸರೆಯಾಯಿತು ಎಂದು ಹೇಳಿದ್ದಾರೆ.
ಬಡವರು, ಶ್ರೀಮಂತರೆಂಬ ತಾರತಮ್ಯ ಮಾಡದೆ ಯೋಜನೆ ಜಾರಿ ಮಾಡಿದ್ದೇವೆ. ಅನ್ನಕ್ಕಾಗಿ ಯಾರ ಮನೆ ಮುಂದೆ ನಿಲ್ಲಬಾರದೆಂದು ಅನ್ನಭಾಗ್ಯ ಜಾರಿ ಮಾಡಲಾಗಿದೆ. ಆದರೆ, ಈ ಯೋಜನೆಯ ಜಾರಿಯಿಂದ ಸೋಮಾರಿಯಾಗುತ್ತಾರೆಂದು ಚರ್ಚೆ ಮಾಡಿದರು. ಅನ್ನಭಾಗ್ಯ ಜಾರಿ ಮಾಡಿದ್ದು ವೋಟು, ಪ್ರಚಾರಕ್ಕಾಗಿ ಅಲ್ಲ. ಕೊಟ್ಟ ಮಾತಿನಂತೆ ಒಂದು ವರ್ಷದಲ್ಲಿ 5 ಗ್ಯಾರಂಟಿಗಳ ಜಾರಿ ಮಾಡಿದ್ದೇವೆ ಎಂದಿದ್ದಾರೆ. ನಮ್ಮ ಯೋಜನೆಗಳಿಗೆ ಜಾತಿ, ಧರ್ಮ, ಆರ್ಥಿಕ ಇತಿ ಮಿತಿಗಳಿಲ್ಲ ಎಂದಿದ್ದಾರೆ ಎಂದು ಹೇಳಿದ್ದಾರೆ.