ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಗ್ರಿಡ್ ಕಂಟ್ರೋಲರ್ ಆಫ್ ಇಂಡಿಯಾದಲ್ಲಿ (GRID Recruitment 2025) 47 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 1ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಏಪ್ರಿಲ್ 30ರ ರಾತ್ರಿ 11.45ರೊಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಗಡುವು ನೀಡಲಾಗಿದೆ. ಅಭ್ಯರ್ಥಿಗಳು posoco.in. ವೆಬ್ ಪೋರ್ಟಲ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅರ್ಹತೆಗಳು
- 28 ವರ್ಷದೊಳಗಿನವರಾಗಿರಬೇಕು
- ಬಿಇ/ಬಿಟೆಕ್/ಬಿಎಸ್ಸಿ (ಎಂಜಿನಿಯರಿಂಗ್) ಪದವಿ ಪಡೆದಿರಬೇಕು
- 2025ರ ಗೇಟ್ ಪರೀಕ್ಷೆಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ತೇರ್ಗಡೆ ಹೊಂದಿರಬೇಕು
ಆಯ್ಕೆ ಪ್ರಕ್ರಿಯೆ ಹೇಗೆ?
2025ರ ಗೇಟ್ ಪರೀಕ್ಷೆಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಪಡೆದ ಅಂಕಗಳನ್ನು ಆಧರಿಸಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಗ್ರೂಪ್ ಡಿಸ್ಕಷನ್ ಹಾಗೂ ವೈಯಕ್ತಿಕ ಸಂದರ್ಶನ ಮಾಡಲಾಗುತ್ತದೆ. ಸಂದರ್ಶನದ ವೇಳೆ ಬಿಹೇವಿಯಲ್ ಅಸೆಸ್ ಮೆಂಟ್ ಕೂಡ ಇರುತ್ತದೆ. ಇಷ್ಟೂ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ನೇಮಕಾತಿ ಆದೇಶ ನೀಡಲಾಗುತ್ತದೆ. ಗ್ರಿಡ್ ಕಂಟ್ರೋಲರ್ ಆಫ್ ಇಂಡಿಯಾ ಕಚೇರಿಯು ದೆಹಲಿಯಲ್ಲಿದೆ. ಅಲ್ಲಿಯೇ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.
ವೇತನ ಎಷ್ಟು?
ಎಕ್ಸಿಕ್ಯೂಟಿವ್ ಟ್ರೈನಿ ಆಗಿ ನೇಮಕಾತಿ ಹೊಂದಿದವರಿಗೆ ಮಾಸಿಕ 50 ಸಾವಿರ ರೂಪಾಯಿಯಿಂದ 1.6 ಲಕ್ಷ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಎಕ್ಸಿಕ್ಯೂಟಿವ್ ಟ್ರೈನಿ ಅಧಿಕಾರ ವಹಿಸಿಕೊಳ್ಳುವ ಮೊದಲು ಒಂದು ವರ್ಷ ತರಬೇತಿ ನಿಡಲಾಗುತ್ತದೆ. ತರಬೇತಿಯ ವೇಳೆ ವಿವಿಧ ಭತ್ಯೆಗಳು, ಸೌಕರ್ಯಗಳು ದೊರೆಯಲಿವೆ. ಇದಾದ ಬಳಿಕವೇ ಎಕ್ಸಿಕ್ಯೂಟಿವ್ ಟ್ರೈನಿ ಎಂದು ನೇಮಕ ಮಾಡಲಾಗುತ್ತದೆ. ಟ್ರೈನಿಂಗ್ ಬಳಿಕ ಮುಂದುವರಿಸುವ ತೀರ್ಮಾನವು ಆಡಳಿತ ಮಂಡಳಿಯದ್ದಾಗಿರುತ್ತದೆ.