ಶಿವಮೊಗ್ಗ: ನಗರದಲ್ಲಿ ಇಂದು ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ಸಂಪೂರ್ಣ ನಗರ ಹಸಿರುಮಯವಾಗಿದ್ದು, ಹಸಿರು ಧ್ವಜಗಳು ರಾರಾಜಿಸುತ್ತಿವೆ.
ಮುಸ್ಲಿಂ ಏರಿಯಾಗಳಾದ ಟಿಪ್ಪು ನಗರ, ಟ್ಯಾಂಕ್ ಮೊಹಲ್ಲಾ, ಶಾದಿ ಮೊಹಲ್ಲಾ, ಎಎ ಸರ್ಕಲ್ ಸೇರಿದಂತೆ ಹಲವೆಡೆ ಮೆಕ್ಕಾ- ಮದೀನಾ ಮಾದರಿಯ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ.
ಶಿವಮೊಗ್ಗದ ಜಾಮೀಯಾ ಮಸೀದಿಯಿಂದ ಮೆರವಣಿಗೆ ಆರಂಭ ಆಗಲಿದ್ದು, ಸೆ.5 ರಂದು ನಡೆಯಬೇಕಿದ್ದ ಈದ್ ಮಿಲಾದ್ ಮೆರವಣಿಗೆಯನ್ನು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಿನ್ನಲೆ 10 ದಿನ ಮುಂದೂಡಲಾಗಿತ್ತು.
ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ಶಿವಮೊಗ್ಗ ಪೊಲೀಸ್ ಇಲಾಖೆಯಿಂದ ಬಾರೀ ಬಂದೋಬಸ್ತ್ ಮಾಡಿದ್ದು, ನಗರದ ಗಲ್ಲಿಗಲ್ಲಿಗಳಲ್ಲೂ ಹದ್ದಿನ ಕಣ್ಣಿಟ್ಟಿದ್ದಾರೆ.



















