ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೇ ಮಧ್ಯದಲ್ಲಿ ಮಹತ್ವದ ಘಟನೆ ಸಂಭವಿಸಲಿದ್ದು, ರಾಜಧಾನಿಯ ಆಡಳಿತದಲ್ಲಿ ದೊಡ್ಡ ಬದಲಾವಣೆ ಆಗಲಿದೆ.
ಮೇ 15 ರ ನಂತರ ಬೆಂಗಳೂರಿನ ಪ್ರಾದೇಶಿಕ-ಭೌಗೋಳಿಕತೆಯ ವ್ಯಾಪ್ತಿ-ವಿಸ್ತೀರ್ಣ ಬದಲಾಗಲಿದೆ. ಇಲ್ಲಿಯವರೆಗೆ ಇದ್ದ ಬೆಂಗಳೂರು ಚಿತ್ರಣ ಇನ್ನು ಮುಂದೆ ಇರುವುದಿಲ್ಲ.ಮೇ 14 ರ ನಂತರ ಬಿಬಿಎಂಪಿ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಬಿಬಿಎಂಪಿಯ ಹೆಸರು-ಸ್ವರೂಪದಲ್ಲಿ ಭಾರೀ ಬದಲಾವಣೆಯಾಗಲಿದೆ. ಮೇ 15 ರಿಂದಲೇ ಬಿಬಿಎಂಪಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಗಲಿದೆ. ಮೇ 15ರ ನಂತರ ಬಿಬಿಎಂಪಿ ಅಸ್ತಿತ್ವದಲ್ಲಿ ಇರುವುದಿಲ್ಲ. ಒಂದಿದ್ದ ಪಾಲಿಕೆಯ ವ್ಯಾಪ್ತಿ 3 ಪಾಲಿಕೆಗಳಾಗಿ ವಿಂಗಡಣೆಯಾಗಿ ವಿಸ್ತರಣೆಯಾಗಲಿದೆ. ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ ಆಡಳಿತಾಧಿಕಾರಿ ನೇಮಕಗೊಳ್ಳಲಿದ್ದಾರೆ.
ಆಡಳಿತಾಧಿಕಾರಿ ಅಡಿಯಲ್ಲೇ ಮೂರು ಪಾಲಿಕೆಗಳ ಅಡಳಿತ ನಿರ್ವಹಣೆ ನಡೆಯಲಿದೆ. ಮೂರು ಪಾಲಿಕೆಗಳಿಗೆ ಮೂವರು ಕಮೀಷನರ್ ನೇಮಕವಾಗಲಿದ್ದಾರೆ. ಮೂರು ಪಾಲಿಕೆಗಳಿಗೂ ಅನುಭವಿ ಹಿರಿಯ ಐಎಎಸ್ ಗಳ ನಿಯೋಜನೆ ಸಾಧ್ಯತೆ ಇದೆ. ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿರುವ ಸಾಕಷ್ಟು ಪ್ರದೇಶಗಳೂ ಸೇರಲಿವೆ.
ಮೇ 15 ರ ನಂತರ ‘ಗ್ರೇಟರ್ ಬೆಂಗಳೂರು ಪ್ರದೇಶ’ ತಲಾ 125 ವಾರ್ಡ್ ಗಳನ್ನು ಒಳಗೊಂಡ ಮೂರು ನಗರ ಪಾಲಿಕೆಗಳನ್ನು ಹೊಂದಿರಲಿವೆ. ಪ್ರತಿ ಪಾಲಿಕೆಗೂ ‘ಗ್ರೇಟರ್ ಬೆಂಗಳೂರು ಪ್ರದೇಶ’ದ ಗಡಿ ನಿಗದಿ ಮಾಡಲಾಗುತ್ತದೆ. ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಜಿಗಣಿ ಕೈಗಾರಿಕೆ ಪ್ರದೇಶ, ಬೊಮ್ಮಸಂದ್ರ, ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ ಸೇರಲಿವೆ.
ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯೂ ‘ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಲಿವೆ. ಎಲ್ಲಾ ಪಾಲಿಕೆಗಳ ಹೆಸರು ‘ಬೆಂಗಳೂರು’ ಎನ್ನುವುದರಿಂದಲೇ ಆರಂಭವಾಗಲಿವೆ.
ಮೂರು ಪಾಲಿಕೆಗಳ ಹೆಸರೇನು?
- ಬೆಂಗಳೂರು ಕೇಂದ್ರ ನಗರ ಪಾಲಿಕೆ
- ಬೆಂಗಳೂರು ಉತ್ತರ ನಗರ ಪಾಲಿಕೆ
- ಬೆಂಗಳೂರು ದಕ್ಷಿಣ ನಗರ ಪಾಲಿಕೆ
28 ವಿಧಾನಸಭಾ ಕ್ಷೇತ್ರಗಳು ಮೂರು ಪಾಲಿಕೆಗಳ ವ್ಯಾಪ್ತಿಯಲ್ಲಿ ಹಂಚಿಕೆ - ಬೆಂಗಳೂರು ಉತ್ತರ ನಗರ ಪಾಲಿಕೆ..
ದಾಸರಹಳ್ಳಿ, ರಾಜರಾಜೇಶ್ವರಿ ನೇಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಯಲಹಂಕ, ಹೆಬ್ಬಾಳ, ಯಶವಂತಪುರ.
ಬೆಂಗಳೂರು ಕೇಂದ್ರ ನಗರ ಪಾಲಿಕೆ.
ಕೆ.ಆರ್. ಪುರಂ, ಮಹಾದೇವಪುರ, ಸಿ.ವಿ.ರಾಮನ್ ನಗರ, ಗಾಂಧಿನಗರ, ರಾಜಾಜಿನಗರ, ಶಿವಾಜಿ ನಗರ, ಮಲ್ಲೇಶ್ವರಂ, ಸರ್ವಜ್ಞನಗರ, ಪುಲಕೇಶಿನಗರ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ
ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಪದ್ಮನಾಭನಗರ, ಶಾಂತಿನಗರ, ಬಸವನಗುಡಿ, ಜಯನಗರ, ಬಿಟಿಎಂ ಲೇಔಟ್, ಚಾಮರಾಜಪೇಟೆ, ವಿಜಯನಗರ, ಗೋವಿಂದ ರಾಜನಗರ, ಚಿಕ್ಕಪೇಟೆ ವ್ಯಾಪ್ತಿಗೆ ಬರಲಿವೆ.