ಬೆಂಗಳೂರು : ಬಿಬಿಎಂಪಿ ಇನ್ನು ಮುಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಬದಲಾಗಲಿದೆ. ಹೌದು, ಗ್ರೇಟರ್ ಬೆಂಗಳೂರು ಅಡಿಯಲ್ಲಿ ಇನ್ಮುಂದೆ 5 ಪಾಲಿಕೆಗಳಿರಲಿದ್ದು, ಐದು ಪಾಲಿಕೆಗಳು 10 ವಲಯಗಳನ್ನು ಹೊಂದಿರಲಿವೆ
ಪ್ರತಿ ಪಾಲಿಕೆಗೂ ಎರಡೆರಡು ವಲಯಗಳಾಗಿ ತಾತ್ಕಾಲಿಕ ಕಚೇರಿ ಗುರುತಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
“ಐದು ಪಾಲಿಕೆಗಳ ವಲಯಗಳು :”
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೇಂದ್ರ ಕಚೇರಿಯ ಮುಖ್ಯ ಕಟ್ಟಡ (ಅನೆಕ್ಸ್-1), ಅನೆಕ್ಸ್-2 ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದೆ.
1. ಬೆಂಗಳೂರು ಕೇಂದ್ರ ನಗರ ಪಾಲಿಕೆ :
ವಲಯ-1: ಹಾಲಿ ಪೂರ್ವ ವಲಯ ಕಚೇರಿ.
ವಲಯ-2: ಕೇಂದ್ರ ಕಛೇರಿಯ ಅನೆಕ್ಸ್-3 ಕಟ್ಟಡ.
2. ಬೆಂಗಳೂರು ಪೂರ್ವ ನಗರ ಪಾಲಿಕೆ:
– ವಲಯ-1: ಹಾಲಿ ಮಹದೇವಪುರ ವಲಯ ಕಚೇರಿ.
– ವಲಯ-2: ಹಾಲಿ ಕೆ.ಆರ್.ಪುರಂ ಮುಖ್ಯ ಅಭಿಯಂತರರ ಕಛೇರಿ.
3. ಬೆಂಗಳೂರು ಪಶ್ಚಿಮ ನಗರ ಪಾಲಿಕೆ :
– ವಲಯ-1: ಹಾಲಿ ಆರ್.ಆರ್.ನಗರ ವಲಯ ಕಚೇರಿ..
– ವಲಯ-2: ಹಾಲಿ ಪಾಲಿಕೆ ಸೌಧ, ಚಂದ್ರಾಲೇಔಟ್ ವಲಯ ಕಚೇರಿ.
4. ಬೆಂಗಳೂರು ಉತ್ತರ ನಗರ ಪಾಲಿಕೆ :
– ವಲಯ-1: ಹಾಲಿ ಯಲಹಂಕ ವಲಯ ಕಚೇರಿ.
– ವಲಯ-2: ಹಾಲಿ ದಾಸರಹಳ್ಳಿ ವಲಯ ಕಚೇರಿ.
5. ಬೆಂಗಳೂರು ದಕ್ಷಿಣ ನಗರ ಪಾಲಿಕೆ:
– ವಲಯ-1: ಹಾಲಿ ದಕ್ಷಿಣ ವಲಯ ಕಚೇರಿ.
– ವಲಯ-2: ಹಾಲಿ ಬೊಮ್ಮನಹಳ್ಳಿ ವಲಯ ಕಚೇರಿ.


















