ಬೆಂಗಳೂರು: ಬೆಳೆಯುತ್ತಿರುವ ಬೆಂಗಳೂರು ನಗರ ಒಂದೇ ಸಂಸ್ಥೆಯಿಂದ ನಿರ್ವಹಣೆ ಮಾಡುವುದು ಕಷ್ಟ ಎಂದು ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿ ಐದು ಪಾಲಿಕೆಗಳಾಗಿ ವಿಂಗಡಿಸಿ ಆಡಳಿತ ನಡೆಸುವುದಕ್ಕೆ ಆದೇಶ ಮಾಡಿದೆ. ಸೆ.2 ರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ಜಾರಿಯಾಗಲಿದೆ.
ಐದು ಪಾಲಿಕೆಗಳು ಯಾವುವು ? ಮತ್ತೆ ಐದು ಪಾಲಿಕೆಗಳ ಕಚೇರಿ ಎಲ್ಲಿ ಬರುತ್ತದೆ ಎಂಬ ಪ್ರಶ್ನೆಗಳು ಜನರಲ್ಲಿವೆ. ಅದಕ್ಕೆ ಉತ್ತರ ಕೂಡ ಲಭ್ಯವಾಗಿದ್ದು, ಐದು ಪಾಲಿಕೆಗಳಿಗೆ 10 ಕಚೇರಿಗಳನ್ನು ಗುರುತು ಮಾಡಲಾಗಿದೆ.
5 ಪಾಲಿಕೆಗಳಿಗೆ 10 ತಾತ್ಕಾಲಿಕ ಕಚೇರಿಗಳ ಗುರುತು
- ಗ್ರೇಟರ್ ಬೆಂಗಳೂರು ಪ್ರಾಧಿಕಾರ
ಕಾರ್ಪೋರೇಷನ್ ಸರ್ಕಲ್ ಕೇಂದ್ರ ಕಚೇರಿ ಮುಖ್ಯ ಕಟ್ಟಡ ಅನೆಕ್ಸ್ 1 – ಅನೆಕ್ಸ್ 2 - ಬೆಂಗಳೂರು ನಗರ ಕೇಂದ್ರ ನಗರ ಪಾಲಿಕೆ
ಹಾಲಿ ಪೂರ್ವ ವಲಯ ಕಚೇರಿ
ಕೇಂದ್ರ ಕಚೇರಿ ಅನೆಕ್ಸ್ ಕಟ್ಟಡ - ಬೆಂಗಳೂರು ಪೂರ್ವ ನಗರ ಪಾಲಿಕೆ
ಮಹಾದೇವಪುರ ವಲಯ ಕಚೇರಿ
ಕೆ.ಆರ್ ಪುರಂ ಕಚೇರಿ - ಪಶ್ಚಿಮ ವಲಯ
ಆರ್.ಆರ್ ನಗರ ವಲಯ ಕಚೇರಿ
ಹಾಲಿ ಪಾಲಿಕೆ ಸೌಧ ಚಂದ್ರ ಲೇಔಟ್ - ಬೆಂಗಳೂರು ಉತ್ತರ ನಗರ ಪಾಲಿಕೆ
ಹಾಲಿ ಯಲಹಂಕ ವಲಯ ಕಚೇರಿ
ಹಾಲಿ ದಾಸರಹಳ್ಳಿ ವಲಯ ಕಚೇರಿ - ಬೆಂಗಳೂರು ದಕ್ಷಿಣ ನಗರ ಪಾಲಿಕೆ
ಹಾಲಿ ದಕ್ಷಿಣ ವಲಯ ಕಚೇರಿ
ಹಾಲಿ ಬೊಮ್ಮನಹಳ್ಳಿ ವಲಯ ಕಚೇರಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ 15 ಐಎಎಸ್, 20 ಕ್ಕೂ ಹೆಚ್ಚು ಕೆಎಎಸ್ ಮತ್ತು ಇಬ್ಬರು ಐಪಿಎಸ್ ಅಧಿಕಾರಗಳ ಹುದ್ದೆಯನ್ನ ರಚನೆ ಮಾಡಲಾಗಿದೆ. ಐದು ಪಾಲಿಕೆಗಳಿಗೂ 28 ವಿಧಾನಸಭಾ ಕ್ಷೇತ್ರಗಳನ್ನ ಹಂಚಿಕೆ ಮಾಡಲಾಗಿದೆ.
ಯಾವ್ಯಾವ ಪಾಲಿಕೆಗೆ ಎಷ್ಟೆಷ್ಟು ವಿಧಾನಸಭಾ ಕ್ಷೇತ್ರ ಹಂಚಿಕೆ? - ಬೆಂಗಳೂರು ಪಶ್ಚಿಮ ನಗರ ಪಾಲಿಕೆ – 10 ವಿಧಾನಸಭಾ ಕ್ಷೇತ್ರ
- ಬೆಂಗಳೂರು ಕೇಂದ್ರ ನಗರ ಪಾಲಿಕೆ – 7 ವಿಧಾನಸಭಾ ಕ್ಷೇತ್ರ
- ಬೆಂಗಳೂರು ಪೂರ್ವ ನಗರ ಪಾಲಿಕೆ – 2 ವಿಧಾನಸಭಾ ಕ್ಷೇತ್ರ
- ಬೆಂಗಳೂರು ಉತ್ತರ ನಗರ ಪಾಲಿಕೆ – 7 ವಿಧಾನಸಭಾ ಕ್ಷೇತ್ರ
- ಬೆಂಗಳೂರು ದಕ್ಷಿಣ ನಗರ ಪಾಲಿಕೆ – 8 ವಿಧಾನಸಭಾ ಕ್ಷೇತ್ರ



















