ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಬದಲಾವಣೆಯಾಗಿದೆ.
ಲಾರ್ಡ್ಸ್ ನಲ್ಲಿ ನಡೆದ ಈ ಪಂದ್ಯವನ್ನು ಇಂಗ್ಲೆಂಡ್ ತಂಡವು ಇನಿಂಗ್ಸ್ ಹಾಗೂ 114 ರನ್ ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಇಂಗ್ಲೆಂಡ್ ಗೆ ಭಾರೀ ಲಾಭವಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್ಸ್ ಟೇಬಲ್ನಲ್ಲಿ ಭಾರತ ತಂಡ ಅಗ್ರಸ್ಥಾನದಲ್ಲಿ ಮುಂದುವರೆದಿದೆ. 68.51 ರಷ್ಟು ಗೆಲುವಿನ ಶೇಕಡಾವಾರುದೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು, ಆಸೀಸ್ ಪಡೆಯ ಗೆಲುವಿನ ಶೇಕಡಾವಾರು ಸದ್ಯ 62.50 ಆಗಿದೆ. ಅಂದರೆ ಮೊದಲ ಮತ್ತು ಎರಡನೇ ತಂಡದ ನಡುವಿನ ಅಂತರ ಕಡಿಮೆಯಾಗಿದೆ.
ನ್ಯೂಜಿಲೆಂಡ್ ಕ್ರಿಕೆಟ್ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ತಂಡದ ಗೆಲುವಿನ ಶೇಕಡಾವಾರು 50 ಆಗಿದೆ. ಶ್ರೀಲಂಕಾ ಕೂಡ 50 ರಷ್ಟು ಗೆಲುವಿನ ಶೇಕಡಾವಾರು ಹೊಂದಿದೆ. ಆದರೆ ನ್ಯೂಜಿಲೆಂಡ್ 90 ಅಂಕ ಹಾಗೂ ಶ್ರೀಲಂಕಾ 24 ಅಂಕ ಹೊಂದಿರುವುದರಿಂದ ನ್ಯೂಜಿಲೆಂಡ್ ಮೇಲಿದೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೋಲು ಅನುಭವಿಸಿದೆ. ಈ ಮೂಲಕ ವೆಸ್ಟ್ ಇಂಡೀಸ್‌ನ ಗೆಲುವಿನ ಶೇಕಡಾವಾರು 33.33 ಆಗಿದ್ದು, ಈಗ 26.66ಕ್ಕೆ ಇಳಿದಿದೆ. ಹೀಗಾಗಿ ವಿಂಡೀಸ್ ತಂಡವು ಆರನೇ ಸ್ಥಾನದಲ್ಲಿದೆ.
ವೆಸ್ಟ್ ಇಂಡೀಸ್ ತಂಡವನ್ನು ಇನ್ನಿಂಗ್ಸ್ನಿಂದ ಸೋಲಿಸಿದ ಇಂಗ್ಲೆಂಡ್ ತಂಡ ಒಂಬತ್ತನೇ ಸ್ಥಾನದಲ್ಲಿದ್ದರೂ ಗೆಲುವಿನ ಶೇಕಡಾವಾರು ಏರಿಕೆಯಾಗಿದೆ. ಹಿಂದೆ ತಂಡದ ಗೆಲುವಿನ ಶೇಕಡಾವಾರು 17.50 ಇದ್ದು, ಈಗ 25ಕ್ಕೆ ಏರಿಕೆಯಾಗಿದೆ.