ಬೆಂಗಳೂರು | ನಗರದಲ್ಲಿ ಗನ್ ಸಪ್ಲೈ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಆರ್ಥಿಕ ಅಪರಾಧ ದಳ ತಂಡ, ಮಧ್ಯಪ್ರದೇಶದ ಸೈಯದ್ ಇರ್ಫಾನ್ ರಿಜ್ವಿ ಎಂಬಾತನನ್ನು ಬಂಧಿಸಿದೆ.
ಬಂಧಿತ ಸೈಯದ್ ಇರ್ಫಾನ್ ರಿಜ್ವಿ ಕಳೆದ ತಿಂಗಳು ಬೆಂಗಳೂರಿನ ಮಸೂದ್ ಎಂಬಾತನಿಗೆ ಗನ್ ಸಪ್ಲೈ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಭೋಪಾಲ್ ಮೂಲದ ಜಾವೀದ್ ಎಂಬಾತ ಕೂಡ ಭಾಗಿಯಾಗಿದ್ದಾನೆ. ಇವನು ಮಸೂದ್‌ಗೆ ಗನ್ ಸಪ್ಲೈ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಶವಂತಪುರ ರೈಲು ನಿಲ್ದಾಣದಲ್ಲಿ ಮಸೂದ್ ಮತ್ತು ಜಾವೀದ್ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇವರಿಂದ ಸಿಕ್ಕ ಮಾಹಿತಿ ಆಧರಿಸಿ ಇರ್ಫಾನ್‌ವರೆಗೆ ಪೊಲೀಸರು ತಲುಪಿದ್ದಾರೆ. ನಂತರ ಮಧ್ಯಪ್ರದೇಶಕ್ಕೆ ತೆರಳಿ ಸೈಯದ್ ಇರ್ಫಾನ್ ರಿಜ್ವಿಯನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ಸಿಸಿಬಿ ತಂಡದ ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಬಂಧಿತನಿಂದ 4 ಗನ್‌ಗಳು ಮತ್ತು 52 ಜೀವಂತ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಜಾಲದ ಹಿಂದೆ ಇನ್ನಷ್ಟು ಮಂದಿ ಇದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರೆದಿದೆ. ಸದ್ಯ ಸಿಸಿಬಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಮುಂದಿನ ಹಂತದ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಮಧ್ಯಪ್ರಾಚ್ಯ ವಾರ್ ಎಫೆಕ್ಟ್.. ಹಾಸನದಲ್ಲಿ ಗ್ಯಾಸ್‌ಗಾಗಿ ಪರದಾಟ!



















