ನಟ ಸುದೀಪ್ ಅಭಿನಯದ ಮ್ಯಾಕ್ಸ್’ ಸಿನಿಮಾಕ್ಕೆ ಸಿನಿ ರಸಿಕರು ಉಘೇ ಉಘೇ ಎನ್ನುತ್ತಿದ್ದಾರೆ. ಈ ಮಧ್ಯೆ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಯುಐ ಚಿತ್ರ ಮಂಕಾಗಿದೆ.
ಸದ್ಯದ ವಾತಾವಣದಲ್ಲಿ ದೊಡ್ಡ ಬಜೆಟ್ ಸೇರಿದಂತೆ ಸ್ಟಾರ್ ನಟರ ಚಿತ್ರಗಳು ರಾಜ್ಯದಲ್ಲಿ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಮ್ಯಾಕ್ಸ್ ಇನ್ನೂ ಹೆಚ್ಚಿನ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನಟ ಸುದೀಪ್ ಚಿತ್ರಗಳು ಪ್ರೀತಿ, ಪ್ರೇಮ, ಪ್ರಣಯದ ಸುತ್ತ ಹೆಣೆದಿರುತ್ತಿದ್ದವು. ಆದರೆ, ಮ್ಯಾಕ್ಸ್ ನಲ್ಲಿ ಸಂಪೂರ್ಣ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಭಿಮಾನಿಗಳ ಖುಷಿಗೆ ಕಾರಣವಾಗಿದ್ದು, ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
‘ಮ್ಯಾಕ್ಸ್’ ಸಿನಿಮಾ ಮೊದಲ ವಾರ ಭರ್ಜರಿಯಾಗಿ ಗಳಿಕೆ ಮಾಡಿತ್ತು. 2024ರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಕೂಡ ಈ ಚಿತ್ರ ಪಾತ್ರವಾಯಿತು. ಇದನ್ನು ಗಮನಿಸಿದರೆ, 2025ರಲ್ಲೂ ಈ ಚಿತ್ರ ದಾಖಲೆ ಬರೆಯುವ ಸಾಧ್ಯತೆ ಇದೆ. ಹೊಸ ವರ್ಷದ ಮೊದಲ ದಿನ ಈ ಚಿತ್ರ 4.15 ಕೋಟಿ ರೂ. ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 36 ಕೋಟಿ ರೂ. ದಾಟಿದೆ ಎಂದು ತಿಳಿದು ಬಂದಿದೆ. ಉಪೇಂದ್ರ ನಟನೆಯ ‘ಯುಐ’ ಸಿನಿಮಾದ ಗಳಿಕೆ ಕೊಂಚ ತಗ್ಗಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ 30 ಕೋಟಿ ರೂ. ಹತ್ತಿರ ಇದೆ ಎನ್ನಲಾಗುತ್ತಿದೆ.