ಬೆಂಗಳೂರು : ವಿವಾದಿತ ಕೇಂದ್ರ ಬಿಂದು ಚಾಮರಾಜಪೇಟೆ ಈದ್ಗಾ ಮೈದಾನಲ್ಲಿ ಈ ಬಾರಿಯೂ ಸರ್ಕಾರದಿಂದಲೇ ಸ್ವಾತಂತ್ರ ದಿನಾಚರಣೆ ನಡೆಸಲಾಗುತ್ತಿದೆ.
ಕಂದಾಯ ಇಲಾಖೆಯಿಂದ ಈ ಬಾರಿ ಮೈದಾನದಲ್ಲಿ ಧ್ವಜಾರೋಹಣ ಮಾಡಲಾಗುತ್ತಿದ್ದು, ಈಗಾಗಲೇ ಧ್ವಜರೋಹಣಕ್ಕೆ ಜಿಲ್ಲಾಡಳಿತ ಸಿದ್ದತೆ ಮಾಡಿಕೊಳ್ಳುತ್ತಿದೆ. ಈ ಬಾರಿ ಅದ್ದೂರಿ ಧ್ವಜಾರೋಹಣ ಮಾಡುವಂತೆ ನಾಗರಿಕರ ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದೆ.
ಕಳೆದ ಮೂರು ವರ್ಷದಿಂದ ಸರಳವಾಗಿ ಧ್ವಜರೋಹಣವಾಗುತ್ತಿದೆ. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆ ನಾಗರಿಕರನ್ನು ಒಟ್ಟುಗೂಡಿಸಿ ಧ್ವಜಾರೋಹಣ ಮಾಡಬೇಕು. ಇಲ್ಲವಾದಲ್ಲಿ ಚಾಮರಾಜಪೇಟೆ ನಾಗರಿಕರಿಗಾದರೂ ಧ್ವಜಾರೋಹಣಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಪತ್ರದ ಮೂಲಕ ಮನವಿ ಮಾಡಿದೆ.


















