ಬೆಂಗಳೂರು: ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ, ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ ಅವರ ಪುತ್ರಿ ಗ್ರೇಸ್ ಹೇಡನ್ ಕ್ರೀಡಾ ನಿರೂಪಣಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದ್ದಾರೆ. ಕೇವಲ 23 ವರ್ಷದವರಾದರೂ, ಗ್ರೇಸ್ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು, ತಮ್ಮ ತಂದೆಯ ಕ್ರಿಕೆಟ್ ಪರಂಪರೆಯಿಂದ ಸ್ಫೂರ್ತಿ ಪಡೆದು ಕ್ರೀಡಾ ಮಾಧ್ಯಮದಲ್ಲಿ ಭರವಸೆಯ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾದ ಪ್ರವಾಸಿ ತಾಣಗಳಲ್ಲಿ ಅವರು ತೆಗೆಸಿಕೊಂಡ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಭಾರೀ ಗಮನ ಸೆಳೆದಿವೆ.

ತಮ್ಮ ತಂದೆಯಂತೆ ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ ಹಿಡಿದು ಸಾಧನೆ ಮಾಡದಿದ್ದರೂ, ಗ್ರೇಸ್ ಹೇಡನ್ ಕ್ರೀಡಾ ಪ್ರಪಂಚದಲ್ಲಿ ವಿಭಿನ್ನ ರೀತಿಯಲ್ಲಿ ಪ್ರಭಾವ ಬೀರುತ್ತಿದ್ದಾರೆ. ಪ್ರಖ್ಯಾತ ಕ್ರೀಡಾ ನಿರೂಪಕಿಯಾಗಿ ಅವರು ಕ್ರಿಕೆಟ್ ಲೋಕದ ಪ್ರಮುಖ ವ್ಯಕ್ತಿಗಳನ್ನು ಸಂದರ್ಶಿಸುತ್ತಾರೆ ಮತ್ತು ಪಂದ್ಯಗಳಿಗೆ ಕಾಮೆಂಟರಿ ನೀಡುತ್ತಾರೆ. ಅವರ ನಿರೂಪಣಾ ಶೈಲಿ ಯುವ ಅಭಿಮಾನಿಗಳನ್ನು ಸೆಳೆಯುವಂತಿದ್ದು, ಅವರ ಮಾತಿನ ಮೋಡಿ ಜನಮನ ಗೆದ್ದಿದೆ.
ಈ ವರ್ಷ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಗ್ರೇಸ್ ಕ್ರೀಡಾ ನಿರೂಪಕಿಯಾಗಿ ಕಾಣಿಸಿಕೊಂಡಿದ್ದು, ಅವರ ಜನಪ್ರಿಯತೆಗೆ ಮತ್ತಷ್ಟು ಪುಷ್ಠಿ ನೀಡಿತು. ಐಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ಅವರ ಉಪಸ್ಥಿತಿ, ಭವಿಷ್ಯದಲ್ಲಿ ಅವರು ಕ್ರೀಡಾ ಮಾಧ್ಯಮದಲ್ಲಿ ದೊಡ್ಡ ಸ್ಥಾನ ಪಡೆಯುವ ಸೂಚನೆಯನ್ನು ನೀಡಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಿಕಿನಿ ಫೋಟೋಗಳು
ಕ್ರೀಡಾ ಲೋಕದಲ್ಲಿ ಹೆಸರು ಮಾಡುತ್ತಿರುವಾಗಲೇ, ಗ್ರೇಸ್ ಹೇಡನ್ ಅವರ ವೈಯಕ್ತಿಕ ಜೀವನ ಮತ್ತು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ಇತ್ತೀಚೆಗೆ ಆಸ್ಟ್ರೇಲಿಯಾದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಗ್ರೇಸ್, ಅಲ್ಲಿ ಬಿಕಿನಿ ಧರಿಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಈ ಫೋಟೋಗಳು ತಕ್ಷಣವೇ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿವೆ.

ಬೀಚ್‌ನಲ್ಲಿ ಸನ್ ಹ್ಯಾಟ್ ಧರಿಸಿ ಹಳದಿ ಬಣ್ಣದ ಬಿಕಿನಿಯಲ್ಲಿರುವ ಗ್ರೇಸ್ ಅವರ ಚಿತ್ರಗಳು ಸಖತ್ ಬೋಲ್ಡ್ ಆಗಿ ಕಂಡಿವೆ. ಹಾಗೆಯೇ, ಮತ್ತೊಂದು ಫೋಟೋದಲ್ಲಿ ಬಿಳಿ ಬಿಕಿನಿ ಮತ್ತು ಟ್ರಾನ್ಸ್‌ಪರೆಂಟ್ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಗ್ರೇಸ್ ಅವರ ಲುಕ್‌ಗಳು ಕೂಡ ಅಭಿಮಾನಿಗಳ ಗಮನ ಸೆಳೆದಿವೆ. ಮ್ಯಾಥ್ಯೂ ಹೇಡನ್ ಅವರಂತಹ ಖ್ಯಾತ ಕ್ರಿಕೆಟಿಗನ ಮಗಳು ಈ ರೀತಿ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದು, ಕೆಲವರಿಗೆ ಅಚ್ಚರಿ ಮೂಡಿಸಿದರೆ, ಇನ್ನು ಕೆಲವರು ಅವರ ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ.
ಸಾರಾ ತೆಂಡೂಲ್ಕರ್ ಜೊತೆಗಿನ ಫ್ರೆಂಡ್‌ಶಿಪ್ ಮತ್ತು ಬ್ರ್ಯಾಂಡ್ ಅಂಬಾಸಿಡರ್‌ಶಿಪ್
ಗ್ರೇಸ್ ಹೇಡನ್ ಅವರ ವೈರಲ್ ಆಗಿರುವ ಫೋಟೋಗಳಲ್ಲಿ, ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಜೊತೆ ಆಸ್ಟ್ರೇಲಿಯಾದ ವಿವಿಧ ಸ್ಥಳಗಳಿಗೆ ಪ್ರವಾಸ ಮಾಡಿದ ಚಿತ್ರಗಳೂ ಸೇರಿವೆ. ಈ ಇಬ್ಬರು ಸ್ಟಾರ್ ಕಿಡ್ಸ್ ಜೊತೆಯಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು.
ಕ್ರೀಡಾ ಮಾಧ್ಯಮದಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುವುದರ ಜೊತೆಗೆ, ಗ್ರೇಸ್ ಅವರು ಪ್ರಮುಖ ಬ್ರ್ಯಾಂಡ್‌ಗಳೊಂದಿಗೆ ಸಹ ಸಂಬಂಧ ಹೊಂದಿದ್ದಾರೆ. ಪ್ರಸ್ತುತ, ಅವರು ಮಹೀಂದ್ರಾ ಆಸ್ಟ್ರೇಲಿಯಾದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಅವರ ವೃತ್ತಿಪರ ಬದುಕಿನ ಮತ್ತೊಂದು ಮೈಲಿಗಲ್ಲಾಗಿದೆ.
ವೈಯಕ್ತಿಕ ಜೀವನದ ಸುತ್ತಲಿನ ಗಾಸಿಪ್‌ಗಳು
ಗ್ರೇಸ್ ಹೇಡನ್ ಅವರ ವೈಯಕ್ತಿಕ ಜೀವನದ ಸುತ್ತಲೂ ಕೆಲವು ಗಾಸಿಪ್‌ಗಳು ಹರಿದಾಡುತ್ತಿವೆ. ಕ್ವೀನ್ಸ್‌ಲ್ಯಾಂಡ್‌ನ ಪ್ರಸಿದ್ಧ ಹತ್ತಿ ವ್ಯಾಪಾರಿಯ ಮಗನಾದ ವಿಲ್ಸನ್ ಸ್ಟ್ಯಾಥಮ್ ಜೊತೆ ಗ್ರೇಸ್ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಕೇಳಿಬಂದಿವೆ. ಇವರಿಬ್ಬರು ಇಟಲಿಯ ಸಿಸಿಲಿ ದ್ವೀಪದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು, ಇದು ಅವರ ಪ್ರೇಮ ಸಂಬಂಧದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.
ಒಟ್ಟಾರೆ, ಗ್ರೇಸ್ ಹೇಡನ್ ಕೇವಲ ‘ಮ್ಯಾಥ್ಯೂ ಹೇಡನ್ ಅವರ ಮಗಳು’ ಎಂಬ ಹಣೆಪಟ್ಟಿಯಿಂದ ಹೊರಬಂದು, ಕ್ರೀಡಾ ನಿರೂಪಣಾ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸುತ್ತಿದ್ದಾರೆ. ಅವರ ಬೋಲ್ಡ್ ವೈಯಕ್ತಿಕ ಆಯ್ಕೆಗಳು ಮತ್ತು ಸಾರ್ವಜನಿಕ ಜೀವನದ ಬಗೆಗಿನ ಮುಕ್ತ ನಿಲುವು ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಚರ್ಚೆಗೆ ಒಳಪಡಿಸುತ್ತಿವೆ. ಭವಿಷ್ಯದಲ್ಲಿ ಅವರು ಕ್ರೀಡಾ ಮಾಧ್ಯಮದಲ್ಲಿ ಎತ್ತರಕ್ಕೆ ಬೆಳೆಯುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
“ಶಾನ್ ಮಸೂದ್, ಭಾರತದ ನಾಯಕ” : ಕಾಮೆಂಟರಿ ವೇಳೆ ದಕ್ಷಿಣ ಆಫ್ರಿಕಾದ ದಿಗ್ಗಜ ಶಾನ್ ಪೊಲಾಕ್ ಅವರಿಂದ ಮಹಾ ಪ್ರಮಾದ!