ಬೆಂಗಳೂರು: ಜೂನ್ ತಿಂಗಳಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ದರವನ್ನು ಹೆಚ್ಚಿಸಿದ್ದ ರಾಜ್ಯ ಸರ್ಕಾರ ಈಗ ಮತ್ತೊಮ್ಮೆ ದರ ಏರಿಸಲು ನಿರ್ಧರಿಸಿದೆ.
ಜೂನ್ ತಿಂಗಳಲ್ಲಿ ಪ್ರತಿ ಲೀಟರಿಗೆ 2 ರೂ. ಹೆಚ್ಚಿಸಲಾಗಿತ್ತು. ಹಾಲಿನ ದರ ಏರಿಸುವ ಕುರಿತು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಾಗಡಿ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉದ್ಘಾಟನೆ ಶಂಕು ಸ್ಥಾಪನೆ ಸಂದರ್ಭದಲ್ಲಿ ಮಾತನಾಡಿದ ಅವರು, “ನಂದಿನ ಹಾಲಿನ ದರವನ್ನು ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಈ ಬಾರಿ ಹೆಚ್ಚಳ ಮಾಡುವ ಹಣವನ್ನು ನೇರವಾಗಿ ರೈತರಿಗೆ ವರ್ಗಾಯಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಸರ್ಕಾರ ಜೂನ್ ತಿಂಗಳಲ್ಲಿ ಹಾಲಿನ ದರವನ್ನು 2 ರೂ. ಹೆಚ್ಚಿಸಿತ್ತು. ಪ್ರತಿ 1 ಲೀಟರ್ ಹಾಲಿನ ಬೆಲೆ 22 ರೂ.ಗಳಿಂದ 24 ರೂ.ಗಳಿಗೆ ಹೆಚ್ಚಾಗಿತ್ತು. ಈಗ ಮತ್ತೆ ದರ ಏರಿಕೆಗೆ ಸರ್ಕಾರ ಮುಂದಾಗಿದೆ. ಆದರೆ, ಈ ದರವನ್ನು ರೈತರಿಗೆ ಮರಳಿ ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.