ಬೆಂಗಳೂರು : ಮೊನ್ನೆ ವಿದ್ಯಾಕಾಶಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸಿದ ಪ್ರತಿಭಟನೆ ದೇಶದಲ್ಲಿ ಭಾರೀ ಸದ್ದು ಮಾಡಿದೆ. ಹೀಗಾಗಿ ಇದನ್ನು ಸಿದ್ದರಾಮಯ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ನಿನ್ನೆ (ಫೆ.26) ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆದಿದೆ.
ನಿನ್ನೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 56 ಸಾವಿರ ಹುದ್ದೆ ಭರ್ತಿಗೆ ಒಪ್ಪಿಗೆ ಸೂಚಿಸಲಾಗಿದೆ. ನೇಮಕಾತಿಗೆ ಇರೋ ಸಾಧಕ ಭಾಧಕಗಳ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದ್ದು, ಅಂತಿಮವಾಗಿ ಮೀಸಲಾತಿ ಮಿತಿ 50% ಮೀರದಂತೆ ಒಳಮೀಸಲಾತಿಯೊಂದಿಗೆ ನೇಮಕಾತಿಗೆ ಸರ್ಕಾರ ತೀರ್ಮಾನಿಸಿದೆ. ಇದರಿಂದ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಫಲಸಿಕ್ಕಂತಾಗಿದೆ.
ಹಲವು ಸವಾಲುಗಳ ನಡುವೆ ರಾಜ್ಯ ಸರ್ಕಾರ, ಮೀಸಲಾತಿ ಮಿತಿ 50% ಮೀರದಂತೆ ಒಳಮೀಸಲಾತಿಯೊಂದಿಗೆ ವಿವಿಧ ಇಲಾಖೆಗಳ 56,432 ಖಾಲಿ ಹುದ್ದೆ ನೇಮಕಕ್ಕೆ ತೀರ್ಮಾನಿಸಿದ್ದು, ನೇಮಕಾತಿಗಾಗಿ ತಾತ್ಕಲಿಕ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. 15% ಎಸ್ಸಿ ಮೀಸಲಾತಿಗೆ ಒಳಮೀಸಲು ನೀಡಿ ನೇಮಕಾತಿಗೆ ತೀರ್ಮಾನಿಸಿದೆ.
ಆದ್ರೆ, ಎಸ್‌ಸಿ ಒಳಮೀಸಲಾತಿ 17% ಇಟ್ಟು ತಕ್ಷಣ ನೇಮಕಾತಿ ಅಸಾಧ್ಯ. 17% ಎಸ್ಸಿ ಮೀಸಲಾತಿ ಜಾರಿಗೆ ಕಾನೂನು ಹೋರಾಟಕ್ಕೆ ಸರ್ಕಾರ ಮುಂದಾಗಬೇಕು. ರಾಜ್ಯಪಾಲರು ಒಳ ಮೀಸಲಾತಿ ಮಸೂದೆಗೆ ಒಪ್ಪಿಗೆ ಕೊಟ್ಟಿದ್ದರೂ ಕಾನೂನು ಸಂಘರ್ಷ ಮುಂದುವರಿಸಬೇಕಿದೆ. ಹೀಗಾಗಿ ಹಳೇ ಸೂತ್ರದ ಅನ್ವಯ ಅಂದರೆ 15% ಎಸ್ಸಿ, 3% ಎಸ್ಟಿ ಮೀಸಲಾತಿಯೋಂದಿಗೆ ನೇಮಕಾತಿಗೆ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ | ಯೆಲ್ಲೋ ಲೈನ್ನಲ್ಲಿ ಇಂದಿನಿಂದ 8ನೇ ರೈಲು ಸಂಚಾರ!



















