ವಿಧಾನ ಪರಿಷತ್ ಸದಸ್ಯ ವಿಂದರಾಜು ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಕಿಕ್ ಔಟ್ ಮಾಡದಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಸಿಎಂ ನಿರ್ಧಾರವನ್ನು ಕಾರ್ಯಕರ್ತರು ಸ್ವಾಗತ ಮಾಡಿದ್ದಾರೆ. ಜೊತೆಗೆ ಇನ್ನೊಂದಿಷ್ಟು ಶನಿ ಸಂತಾನಗಳಿವೆ ಅವನ್ನೂ ಹೊರ ಹಾಕಿ ಅಂತಾ ಗರಂ ಆಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎ.ಆರ್ ಹುಸೇನ್ ಪೋಸ್ಟ್ ಹಾಕಿದ್ದು, ಗೋವಿಂದ ರಾಜು ವಜಾಕ್ಕೆ ಖುಷಿ ಹಂಚಿಕೊಂಡಿದ್ದಾರೆ.
ಇದು ಖಂಡಿತ ಆಗಬೇಕಿತ್ತು. ಈತನಿಂದ ಪಕ್ಷಕ್ಕಾಗಲಿ, ಸರ್ಕಾರಕ್ಕಾಗಲಿ ಯಾವುದೇ ಲಾಭವಿಲ್ಲ. ಮುಖ್ಯಮಂತ್ರಿಯ ಅಕ್ಕಪಕ್ಕ ಇನ್ನಷ್ಟು ಶನಿ-ಸಂತಾನಗಳಿವೆ. ಅವರನ್ನು ದೂರವಿಡಬೇಕು. ಡಿಸಿಎಂ ಡಿಕೆಶಿ ಸುತ್ತಮುತ್ತನೂ ಫ್ರಾಡ್ ಗಳ ಸಂತೆಯೇ ಇದೆ. ಇದರ ಜೊತೆ ಗನ್ ಮ್ಯಾನ್‌ಗಳ ಉಪಟಳ ಜಾಸ್ತಿ ಇದೆ. ಇಂತಹ ನೀಚರಿಂದ ಪಕ್ಷದ ಕಾರ್ಯಕರ್ತರು ರೋಸಿ ಹೋಗಿದ್ದಾರೆ ಅಂತಾ ಪೋಸ್ಟ್ ನಲ್ಲಿ ಹುಸೇನ್ ಆಕ್ರೋಶ ಹೊರ ಹಾಕಿದ್ದಾರೆ.



















