ಬೆಂಗಳೂರು: ರಾಜ್ಯಪಾಲರು ವರ್ಸಸ್ ರಾಜ್ಯ ಸರ್ಕಾರ ಎನ್ನುವಂತಹ ಸ್ಥಿತಿ ರಾಜ್ಯದಲ್ಲಿ ಮತ್ತೊಮ್ಮೆ ಸೃಷ್ಟಿಯಾಗಿದೆ. ಈಗ ರಾಜ್ಯಪಾಲರು ಗ್ರೇಟರ್ ಬೆಂಗಳೂರು ಬಿಲ್ ನ್ನು ಮತ್ತೆ ಮರಳಿ ಕಳುಹಿಸಿದ್ದಾರೆ.
ರಾಜ್ಯ ಸರ್ಕಾರ ಮಂಡಿಸಿದ್ದ ಗ್ರೇಟರ್ ಬೆಂಗಳೂರು ಬಿಲ್ ಗೆ ವಿಧಾನ ಸಭೆ ಪರಿಷತ್ ನಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಬಿಜೆಪಿ ಹಾಗೂ ಜೆಡಿಎಸ್ ಆಕ್ಷೇಪದ ನಡುವೆಯೂ ರಾಜ್ಯ ಸರ್ಕಾರ, ಬಿಲ್ ಪಾಸ್ ಮಾಡಿಕೊಂಡಿತ್ತು. ಈಗ ರಾಜ್ಯಪಾಲರು ಬಿಬಿಎಂಪಿ ವಿಭಜನೆ ಮಾಡುವ ವಿಧೇಯಕ ವಾಪಸ್ ಕಳುಹಿಸಿದ್ದಾರೆ.