ಬೆಂಗಳೂರು: ಕೊನೆಗೂ ರಾಜ್ಯಪಾಲರು ವಿಧಾನ ಪರಿಷತ್ (Legislative Council) ಸದಸ್ಯರ ನಾಮ ನಿರ್ದೇಶನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಾಲ್ವರನ್ನು ನಾಮನಿರ್ದೇಶನ (MLC Nomination) ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ನಾಮನಿರ್ದೇಶನ ಅನುಮೋದಿಸಿ ರಾಜ್ಯಪಾಲರು (Governor) ಅಂಕಿತ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿಲ ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು (Ramesh Babu), ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ (Aarthi Krishna), ಹಿರಿಯ ಪತ್ರಕರ್ತ ಕೆ.ಶಿವಕುಮಾರ್ (K Shivakumar) ಮತ್ತು ದಲಿತ ಮುಖಂಡ ಎಫ್.ಎಚ್. ಜಕ್ಕಪ್ಪನವರ ನಾಮ ನಿರ್ದೇಶನಗೊಂಡಿದ್ದಾರೆ.
ಮೂವರು 6 ವರ್ಷಗಳ ಅವಧಿಗೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರೆ, ರಮೇಶ್ ಬಾಬು ಅವರ ಅಧಿಕಾರಾವಧಿ 2026ರ ಜುಲೈ 21ರ ವರೆಗೆ ಮಾತ್ರ ಇರಲಿದೆ.