ಬೆಂಗಳೂರು: ಪೊಲೀಸ್ ಇಲಾಖೆಗೆ ಸಣ್ಣ ಸರ್ಜರಿ ಮಾಡಿರುವ ಸರ್ಕಾರ, ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಇಂದು ಸರ್ಕಾರ ಆದೇಶ ಹೊರಡಿಸಿದೆ. ಐಜಿಪಿ ರವಿಕಾಂತೇಗೌಡ ಅವರನ್ನು ದಾವಣಗೆರೆ ವಲಯಕ್ಕೆ ವರ್ಗಾವಣೆಗೊಳಿಸಲಾಗಿದೆ. ರಮೇಶ್ ಬಿ ಅವರನ್ನು ಜಾಯಿಂಟ್ ಕಮಿಷನರ್ ಬೆಂಗಳೂರು ಪೂರ್ವ (ಅಡಿಷನಲ್ ಸಿಪಿ)ಕ್ಕೆ ವರ್ಗಾವಣೆ ಮಾಡಲಾಗಿದೆ. ಅಲ್ಲದೇ, ಐಜಿಪಿ ಸತೀಶ್ ಕುಮಾರ್ ಅವರನ್ನು ಬೆಂಗಳೂರು ಹೆಡ್ ಕ್ವಾಟ್ರಸ್ ಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.