ಬೆಂಗಳೂರು: ಮುಸ್ಲಿಂ ಓಲೈಕೆಯಿಂದಾಗಿ ರಾಜ್ಯ ಸರ್ಕಾರಕ್ಕೆ ಸಂಕಷ್ಟ ಎದುರಾಗಿದ್ದು, ಈಗ ಎಚ್ಚರಿಕೆಯ ಹೆಜ್ಜೆ ಇಡಲು ಕಾಂಗ್ರೆಸ್ ಮುಂದಾಗಿದೆ. ಮುಸ್ಲಿಂ ಓಲೈಕೆ ಮಾಡುವುದನ್ನೇ ಈಗ ಬಿಜೆಪಿ ಅಸ್ತ್ರವಾಗಿಟ್ಟುಕೊಂಡಿದೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.
ಗುರುವಾರ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಕೆಲವು ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದನ್ನು ಸಚಿವ ಸಂಪುಟ ಸದ್ಯಕ್ಕೆ ತಡೆ ಹಿಡಿದಿದ್ದು, ಇದಕ್ಕೆ ಪುಷ್ಠಿ ನೀಡಿದಂತಾಗಿದೆ. ವಕ್ಫ್ ಆಸ್ತಿ ನೊಂದಣಿ ವಿಚಾರದಲ್ಲಿ ಮುಸ್ಲಿಂ ಓಲೈಕೆ ಎಂಬ ಟೀಕೆಗೆ ಗುರಿಯಾಗಿದ್ದ ಸರ್ಕಾರಕ್ಕೆ ಉಪ ಚುನಾವಣೆ ಸಂದರ್ಭದಲ್ಲಿ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ. ಸರ್ಕಾರದ ಕಾಮಗಾರಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ 4 ಮೀಸಲಾತಿ ನೀಡುವ ವಿಚಾರದಲ್ಲೂ ಓಲೈಕೆ ಎಂಬ ಟೀಕೆಗೆ ಗುರಿಯಾಗಿತ್ತು ರಾಜ್ಯ ಸರ್ಕಾರ. ಇದೆಲ್ಲದರ ಜೊತೆಗೆ ಅಲ್ಪಸಂಖ್ಯಾತ ಸಮುದಾಯದ ನಾಯಕ ಜಮೀರ್ ಅಹಮದ್ ಖಾನ್ ಒಕ್ಕಲಿಗ ನಾಯಕರ ಬಗ್ಗೆ ಆಡಿರುವ ಮಾತು ಕೂಡ ಚುನಾವಣೆ ಮೇಲೆ ಪರಿಣಾ ಮಬೀರಿದೆ. ಹೀಗಾಗಿ ಬಿಜೆಪಿ ಇದನ್ನೇ ಅಸ್ತ್ರವಾಗಿಸಿಕೊಂಡು ಹಿಂದೂ ಮತಗಳನ್ನು ಕ್ರೂಢಿಕರಿಸಲು ಯತ್ನಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ.
ಗುರುವಾರ ಅಲ್ಪಸಂಖ್ಯಾತ ಇಲಾಖೆಯ ವಿಷಯಗಳ ಮೇಲೆ ನಿರ್ಧಾರ ಕೈಗೊಳ್ಳುವುದಕ್ಕೆ ಕ್ಯಾಬಿನೆಟ್ ಹಿಂದೇಟು ಹಾಕಿದೆ. ಗುರುವಾರ ನಡೆದ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧಿಸಿದ ಮೂರು ವಿಷಯಗಳ ಪ್ರಸ್ತಾವನೆ ಇತ್ತು. ಅವುಗಳನ್ನು ಸಂಪುಟ ಮುಂದೂಡಿದೆ.


















