ಬೆಂಗಳೂರು: ಈ ಬಾರಿಯ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮಹತ್ವದ ವಿಧೇಯಕವೊಂದನ್ನು ಅಂಗೀಕರಿಸಿಕೊಂಡಿದೆ.
ಅಲ್ಪಸಂಖ್ಯಾತರು ಎಂಬ ಹಣೆಪಟ್ಟಿಯೊಂದಿಗೆ ಬಿಂಬಿಸಿಕೊಳ್ಳುವ ಮುಸ್ಲಿಂರಿಗೆ ಗುತ್ತಿಗೆ ಆಧಾರದ ಮೇಲೆ ನೀಡುವ ಕಾಮಗಾರಿಗಳಲ್ಲೂ ಶೇ.4% ರಷ್ಟು ಮೀಸಲಾತಿ ನೀಡುವ “ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ – 2025 ರನ್ನು ಅಂಗೀಕರಿಸಿಕೊಂಡಿದೆ. ಈ ಮೂಲಕ ಮುಸ್ಲಿಂರಿಗೆ ಇನ್ಮುಂದೆ ಗುತ್ತಿಗೆಯ ಆಧಾರದ ಮೇಲೂ ಮೀಸಲಾತಿ ಸಿಗಲಿದೆ.