ಬೆಂಗಳೂರಿನ ಹೆಬ್ಬಾಳ ಜಂಕ್ಷನ್ ನಿಂದ ಸಿಲ್ಕ್ ಬೋರ್ಡ್ ವರೆಗೆ ಟನಲ್ ರೋಡ್ ನಿರ್ಮಾನಕ್ಕೆ ರಾಜ್ಯ ಸರ್ಕಾರ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ.
ಎರಡು ಪ್ಯಾಕೇಜ್ ಗಳಲ್ಲಿ ಟನಲ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿದ್ದು, ಸುಮಾರು 17 ಕಿ.ಮೀಟರ್ ಉದ್ದದ ಟನಲ್ ರಸ್ತೆ ಇದಾಗಿದ್ದು, ಇಂದು ಅಧಿಕೃತವಾಗಿ ರಾಜ್ಯ ಸರ್ಕಾರ ಟೆಂಡರ್ ಕರೆದಿದೆ.
ಮೊದಲ ಟೆಂಡರ್ ಪ್ಯಾಕೇಜ್ ನಲ್ಲಿ ಹೆಬ್ಬಾಳ ಜಂಕ್ಷನ್ ನಿಂದ ರೇಸ್ ಕೋರ್ಸ್ ಜಂಕ್ಷನ್ ವರೆಗೆಮೂರು ಪಥದ ಸುರಂಗ ಮಾರ್ಗ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಇದು ಸುಮಾರು 8.8 ಕಿ.ಮೀಟರ್ ಕ್ರಮಿಸಲಿದೆ. ಇದಕ್ಕಾಗಿ ಸುಮಾರು 8770 ಕೋಟಿ ತಗುಲಬಹುದು ಎಂದು ಅಂದಾಜಿಸಲಾಗಿದೆ.
ಎರಡನೇ ಪ್ಯಾಕೇಜ್ ನಲ್ಲಿ ರೇಸ್ ಕೋರ್ಸ್ ಜಂಕ್ಷನ್ ನಿಂದ ಸಿಲ್ಕ್ ಬೋರ್ಡ ಜಂಕ್ಷನ್ ವರೆಗೆ ಸುಮಾರು 8.8 ಕಿ.ಮೀಟರ್ ಕ್ರಮಿಸಲಿದೆ. ಇದಕ್ಕಾಗಿ 8928 ಕೋಟಿ ರೂ. ಅಂದಾಜಿಸಲಾಗಿದೆ. ಎರಡು ಪ್ಯಾಕೇಜ್ ಗೂ ಕಾಲಾವಧಿ ೫೦ ತಿಂಗಳುಗಳ ಕಾಲಾವಧಿ ನೀಡಲಾಗಿದೆ.