ಬೀದರ್: ಗೂಡ್ಸ್ ವಾಹನವೊಂದು 7 ಜನ ಪ್ರಯಾಣಿಕರ ಸಮೇತ ಬಾವಿಗೆ ಬಿದ್ದಿರುವ ಘಟನೆ ನಡೆದಿದೆ.
ಬೀದರ್ ತಾಲೂಕಿನ ಘೋಡಂಪಳ್ಳಿ ಗ್ರಾಮದ ಹತ್ತಿರ ಈ ಘಟನೆ ನಡೆದಿದೆ. ಬೀದರ್ ನಿಂದ ಚಿಟ್ಟಾ ಮಾರ್ಗವಾಗಿ ಘೋಡಂಪಳ್ಳಿಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅತಿವೇಗವಾಗಿ ಚಲಿಸುತ್ತಿದ್ದ ಗೂಡ್ಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಬಾವಿಗೆ ಬಿದ್ದಿದೆ.
ಘಟನೆಯಲ್ಲಿ ಘೋಡಂಪಳ್ಳಿ ಗ್ರಾಮದ ಚಾಲಕ ಲಕ್ಷ್ಮಿಕಾಂತ್ ಅಲಿಯಾಸ್ ಕಾಂತುರಾಜ್(45), ರವಿ (18) ಎಂಬುವವರು ಸಾವನ್ನಪ್ಪಿದ್ದಾರೆ. ಘೋಡಂಪಳ್ಳಿ ಗ್ರಾಮದವರಾದ ಅರ್ಜುನ್, ಪ್ರಜ್ವಲ್, ಪವನ್, ಸಂಗಮೇಶ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಬೀದರ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.