ಮಂಡ್ಯ : ಗೂಡ್ಸ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯದ ನಾಗಮಂಗಲ ಪಟ್ಟಣದಲ್ಲಿ ತಡರಾತ್ರಿ ನಡೆದಿದೆ.
ಮೇಘಾಲಯ ಮೂಲದ ಕೂಲಿ ಕಾರ್ಮಿಕ ಗಣೇಶ್ (25) ಮೃತ ದುರ್ದೈವಿ. ಪಟ್ಟಣದ ಟಿಬಿ ಸರ್ಕಲ್ ನಿಂದ ಮಂಡ್ಯ ಸರ್ಕಲ್ ಕಡೆ ಬರುತ್ತಿದ್ದ ಬೈಕ್ ಹಾಗೂ ಮಂಡ್ಯ ಸರ್ಕಲ್ ನಿಂದ ಟಿಬಿ ಸರ್ಕಲ್ ಕಡೆ ಹೋಗುತ್ತಿದ್ದ ಗೂಡ್ಸ್ ವಾಹನ ಪರಸ್ಪರ ಡಿಕ್ಕಿ ಹೊಡೆದಿವೆ.
ಡಿಕ್ಕಿ ಹೊಡೆದ ರಭಸಕ್ಕೆ ಒಂದು ಕಾರು ಸೇರಿದಂತೆ ಬೈಕ್ ಜಖಂಗೊಂಡಿದೆ. ಗೂಡ್ಸ್ ವಾಹನ ಪಲ್ಟಿಯಾಗಿ ಚಾಲಕನ ಜೊತೆಯಲ್ಲಿದ್ದ ಅಫ್ತಬ್ ಪಾಷ ಎಂಬುವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಈ ಭೀಕರ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ನಾಗಮಂಗಲ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















