ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಸ್ವದೇಶಿ ಸಾಫ್ಟ್‌ವೇರ್, ಚೆನ್ನೈ ಮೂಲದ ಶ್ರೀಧರ್ ವೆಂಬು ಅವರು ಅಭಿವೃದ್ಧಿಪಡಿಸಿದ ʼಜೊಹೊʼಗೆ ತಮ್ಮ ಮೇಲ್ ಐಡಿಯನ್ನು ಬದಲಾಯಿಸಿಕೊಂಡಿದ್ದಾರೆ. ಈ ಮೂಲಕ ಅಮೆರಿಕದ ಸುಂಕದ ಒತ್ತಡಕ್ಕೆ ಮತ್ತು ಟ್ರಂಪ್ ದುರಹಂಕಾರಕ್ಕೆ ಬಹುದೊಡ್ಡ ಪೆಟ್ಟನ್ನೇ ನೀಡಿದ್ದಾರೆ ಎಂದು ಹೇಳಲಾಗಿದೆ.
ಹೌದು.. ಶಾ ಸಾಮಾಜಿಕ ಜಾಲತಾಣದಲ್ಲಿ ಒಂದು ವಾಕ್ಯವನ್ನು ಬರೆದಿದ್ದು, ಆ ಸಾಲು ಭಾರೀ ಚರ್ಚೆಗೂ ಕಾರಣವಾಗಿದೆ. “ಎಲ್ಲರಿಗೂ ನಮಸ್ಕಾರ, ನಾನು ಜೊಹೊ ಮೇಲ್‌ಗೆ ಬದಲಾಯಿಸಿದ್ದೇನೆ. ದಯವಿಟ್ಟು ನನ್ನ ಇಮೇಲ್ ವಿಳಾಸದಲ್ಲಿನ ಬದಲಾವಣೆಯನ್ನು ಗಮನಿಸಿ. ನನ್ನ ಹೊಸ ಇಮೇಲ್ ವಿಳಾಸ amitshah.bjp@zohomail.in. ಮೇಲ್ ಮೂಲಕ ಭವಿಷ್ಯದ ಪತ್ರವ್ಯವಹಾರಕ್ಕಾಗಿ, ದಯವಿಟ್ಟು ಈ ವಿಳಾಸವನ್ನು ಬಳಸಿ” ಎಂದು ಗೃಹ ಸಚಿವರು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಜೊಹೊ ಮೇಲ್ ಅನ್ನು ಜಿಮೇಲ್ ಮತ್ತು ಮೈಕ್ರೋಸಾಫ್ಟ್ ಔಟ್‌ಲುಕ್‌ಗೆ ಭಾರತದ ಪ್ರತಿಸ್ಪರ್ಧಿ ಎಂದು ಬಿಂಬಿಸಲಾಗಿದೆ.
ಟ್ರಂಪ್‌ಗೆ ಅವರದ್ದೇ ಸ್ಟೈಲ್‌ನಲ್ಲಿ ತಿರುಗೇಟು ಸಹ ನೀಡಿರುವ ಅಮಿತ್ ಶಾ, ತಮ್ಮ ಪೋಸ್ಟ್‌ನ ಕೊನೆಯಲ್ಲಿ ‘Thank you for your kind attention to this matter’ ಎಂದು ಬರೆದಿದ್ದಾರೆ. ಈ ವಾಕ್ಯವನ್ನು ಸಾಮಾನ್ಯವಾಗಿ ಟ್ರಂಪ್ ತಮ್ಮ ಭಾಷಣದ ಕೊನೆಯಲ್ಲಿ ಉಲ್ಲೇಖಿಸುತ್ತಾರೆ. ಆದರೆ ಇದೀಗ ಸ್ವದೇಶಿ ನಿರ್ಮಿತ ಮೇಲ್‌ಗೆ ತಮ್ಮ ಐಡಿಯನ್ನು ಬದಲಾಯಿಸಿಕೊಂಡಿರುವ ಅಮಿತ್ ಶಾ ಅವರು, ಟ್ರಂಪ್‌ಗೆ ಟಕ್ಕರ್ ಕೊಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿದೆ.



















