ಬೆಂಗಳೂರು: ರಾಜ್ಯ ಸರ್ಕಾರ ಐಟಿ ವಲಯದ ಕೆಲಸದ ಅವಧಿಯನ್ನು ಇಳಿಕೆ ಮಾಡುವ ಮೂಲಕ ಸಿಹಿ ಸುದ್ದಿ ನೀಡಿದೆ. ದಿನಕ್ಕೆ 12 ಗಂಟೆ ಬದಲಾಗಿ 10 ಗಂಟೆ ಅವಧಿಗೆ ಇಳಿಕೆ ಮಾಡಿ ಆದೇಶಿಸಿದೆ.
ಕೆಲಸದ ಅವಧಿಯನ್ನು ವಿಸ್ತರಿಸುತ್ತಿದೆ ಎಂದು ಕರ್ನಾಟಕ ಐಟಿ ಉದ್ಯೋಗಿಗಳ ಒಕ್ಕೂಟ ಸರ್ಕಾರದ ವಿರುದ್ಧ ಇತ್ತೀಚೆಗೆ ಅಸಮಧಾನ ಹೊರಹಾಕಿ ಪ್ರತಿಭಟನೆ ನಡೆಸಿತ್ತು.
ಸದ್ಯ, ರಾಜ್ಯ ಸರ್ಕಾರ ಐಟಿ ವಲಯದ ಒತ್ತಡಕ್ಕೆ ಮಣಿದು 12 ಗಂಟೆಯ ಕೆಲಸದ ಅವಧಿಯ ಪ್ರಸ್ತಾವನೆಯನ್ನು ಕೈ ಬಿಟ್ಟದೆ.



















