ಬೆಂಗಳೂರು : ಅಂತರ್ಜಾತಿ ವಿವಾಹಗಳ ಸಂದರ್ಭ ಕುಟುಂಬಸ್ಥರಿಂದ ತೀವ್ರ ವಿರೋಧ, ಬಹಿಷ್ಕಾರ ಹಾಗೂ ಕೆಲ ಪ್ರಕರಣಗಳಲ್ಲಿ ಹಿಂಸೆ, ಕೊಲೆಗಳೂ ನಡೆಯುತ್ತಿರುವುದು ನೋಡಿರಬಹುದು ಇಂತಹ ಜೋಡಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ‘ಇವನಮ್ಮವ ಇವ ನಮ್ಮವ’ ಎಂಬ ಹೊಸ ವಿಧೇಯಕವನ್ನು ಮಂಡಿಸಲಾಗಿದೆ.
ಜಾತಿ ಶ್ರೇಣೀಕರಣ ಮತ್ತು ಸಂಪ್ರದಾಯಗಳ ಹೆಸರಿನಲ್ಲಿ ನಡೆಯುವ ಹಿಂಸೆ ಹಾಗೂ ಕಿರುಕುಳವನ್ನು ತಡೆಯುವ ಉದ್ದೇಶದಿಂದ ಈ ವಿಧೇಯಕ ರೂಪಿಸಲಾಗಿದ್ದು, ಅಂತರ್ಜಾತಿ ವಿವಾಹಿತರಿಗೆ ಕಾನೂನಾತ್ಮಕ ರಕ್ಷಣೆ ಒದಗಿಸಲು ಸರ್ಕಾರ ಮುಂದಾಗಿದೆ.
ವಿಧೇಯಕ ಏನು ಹೇಳುತ್ತೆ?
- ಅಂತರ್ಜಾತಿ ಮದುವೆಯಾದ್ರೆ ಸಾಮಾಜಿಕ, ಆರ್ಥಿಕ ಬಹಿಷ್ಕಾರ ಹಾಕುವಂತಿಲ್ಲ
- ಸಂಬಂಧಿಸಿದ ಜೋಡಿ ವಾಸಸ್ಥಳದಿಂದ ಹೊರಹೋಗುವಂತೆ ಒತ್ತಾಯಿಸುವುದು ಅವರ ಕುಟುಂಬವನ್ನು ಹೊರಹಾಕುವುದು ಕಾನೂನುಬಾಹಿರ
- ಜಾತಿ, ಇಲ್ಲವೆ ಸಮುದಾಯದಲ್ಲಿ ಬಲವಂತವಾಗಿ ಸಂಪ್ರದಾಯ ಹೇರುವಂತಿಲ್ಲ
- ಅಂತರ್ಜಾತಿ ವಿವಾಹಿತರಿಗೆ ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ
- ಅಂತರ್ಜಾತಿ ವಿವಾಹಿತರಿಂದ ಕುಟುಂಬದ ಆಸ್ತಿ, ದಂಡಹಾಕುವಂತಿಲ್ಲ
- ಕೆಲಸಕ್ಕೆ ಅಡ್ಡಿ, ಕೆಲಸ ಕೊಡಲು ಹಿಂದೇಟು ಹಾಕುವುದು ಅಪರಾಧ
- ಅಂರ್ಜಾತಿ ವಿವಾಹವಾಗಲು ಅವರ ಕುಟುಂಬಸ್ಥರು ವಿರೋಧಿಸುವಂತಿಲ್ಲ
- ಇಬ್ಬರು ವಯಸ್ಕರ ವಿವಾಹಕ್ಕೆ ಪೋಷಕರ ಒಪ್ಪಿಗೆ ಅಗತ್ಯವಿಲ್ಲ
- ವಿವಾಹಿತ ಜೋಡಿಗೆ ಹಿಂಸೆ, ಮಾನಸಿಕ ನಿಂದನೆ ಕಾನೂನುಬಾಹಿರ
- ದಂಪತಿಯನ್ನು ಬಲವಂತವಾಗಿ ದೂರ ಇಡುವ ಪ್ರಯತ್ನ ಸರಿಯಲ್ಲ. ಮದುವೆಯಾದ ಜೋಡಿಯನ್ನ ಕಿಡ್ನ್ಯಾಪ್ ಮಾಡುವುದು, ಆರ್ಥಿಕ ಬಹಿಷ್ಕಾರ ಹಾಕುವುದು ಕಾನೂನುಬಾಹಿರ
- ದಂಪತಿಗೆ ಸಹಕಾರ ಕೊಟ್ಟವರ ಬಹಿಷ್ಕಾರ ಮಾಡುವುದು ಸರಿಯಲ್ಲ
- ಬ್ಯಾಂಕ್ ಖಾತೆ ಸ್ಥಗಿತ, ಉದ್ಯೋಗ ಕೊಟ್ಟವರ ಮೇಲೆ ಒತ್ತಡ ಅಪರಾಧ
- ಲೈಂಗಿಕ ಹಿಂಸೆ ನೀಡುವುದು, ಕಿರುಕುಳ ನೀಡುವುದು ಅಪರಾಧ
- ಬಲವಂತದ ಗರ್ಭಪಾತ ಗರ್ಭಸ್ರಾವಕ್ಕೆ ಒತ್ತಡ ಹೇರುವುದು ಅಪರಾಧ
- ಅಂತರ್ಜಾತಿ ವಿವಾಹವಾದವರ ಬೇರ್ಪಡಿಸಿ ಬೇರೆ ಮದುವೆ ಮಾಡಿಸುವಂತಿಲ್ಲ. ಒಂದು ವೇಳೆ ಮರ್ಯಾದಾ ಹತ್ಯೆ ಮಾಡಿದರೆ 5 ವರ್ಷ ಜೈಲು, ದಂಡ. ದಂಪತಿಯನ್ನು ಗಾಯಗೊಳಿಸಿದ್ರೂ 3 ಲಕ್ಷ ದಂಡ, 3 ವರ್ಷ ಜೈಲು
- ದಂಪತಿಯನ್ನು ಬೆದರಿಸಿದರೆ 5 ವರ್ಷ ಶಿಕ್ಷೆ, 2 ಲಕ್ಷ ರೂಪಾಯಿ ದಂಡ. ನಿರಂತರ ಬೆದರಿಕೆಗೆ 7 ವರ್ಷಗಳವರೆಗೆ ಶಿಕ್ಷೆ ವಿಸ್ತರಣೆ ಮಾಡಬಹುದು
- ವಿವಾಹಿತ ಜೋಡಿ ವಿಚಾರದಲ್ಲಿ ಸಾಕ್ಷಿಗಳ ಗುರುತು, ವಿಳಾಸ ನೀಡುವಂತಿಲ್ಲ
ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತು ಅಂತಹ ಜೋಡಿಗಳ ರಕ್ಷಣೆಗಾಗಿ ಹಲವು ಪ್ರಮುಖ ವಿಚಾರಗಳನ್ನು ವಿಧೇಯಕದಲ್ಲಿ ಸೇರ್ಪಡೆ ಮಾಡಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಂತಹ ವಿಚಾರಗಳನ್ನು ಇದು ಒಳಗೊಂಡಿರುವ ಕಾರಣ, ಕಾಯ್ದೆಯಾದಲ್ಲಿ ಅನ್ಯ ಜಾತಿ ವಿವಾಹವಾಗುವ ಜೋಡಿಗಳಿಗೆ ಕಾನೂನಿನ ಬಲವೂ ಸಿಕ್ಕಂತಾಗಲಿದೆ.
ಇದನ್ನೂ ಓದಿ : ಕೋಗಿಲು ನಿರಾಶ್ರಿತರಿಗೆ ಸರ್ಕಾರದಿಂದ ಯುಗಾದಿ, ರಂಜಾನ್ ಗಿಫ್ಟ್!



















