ಬೆಂಗಳೂರು: WPL ಮ್ಯಾಚ್ ನೋಡಲು ಹೋಗುವವರಿಗೆ ಬಿಎಂಟಿಸಿಯಿಂದ ಕೂಡ ಗುಡ್ ನ್ಯೂಸ್ ಸಿಕ್ಕಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಎಲ್ಲಾ WPL ಮ್ಯಾಚ್ ಗಳಿಗೂ ವಿಶೇಷ ಬಸ್ ಸೇವೆ ಒದಗಿಸಲು ಬಿಎಂಟಿಸಿ ಮುಂದಾಗಿದೆ. WPL ಕ್ರಿಕೆಟ್ ಪ್ರೇಮಿಗಳಿಗೆ ನೆರವಾಗುವ ದೃಷ್ಟಿಯಿಂದ ಬಿಎಂಟಿಸಿ ಬಸ್ ಸೇವೆ ವಿಸ್ತರಿಸಿದೆ.
ಫೆಬ್ರವರಿ 21, 22, 24, 25, 26, 27, 28 ಹಾಗೂ ಮಾರ್ಚ್ 1 ರಂದು ಬೆಂಗಳೂರಿನಲ್ಲಿ ಡಬ್ಲ್ಯೂಪಿಎಲ್ ಪಂದ್ಯಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಬಸ್ ಸೇವೆ ವಿಸ್ತರಿಸಲು ಬಿಎಂಟಿಸಿ ಮುಂದಾಗಿದೆ.
ಈ ಎಲ್ಲಾ ಮ್ಯಾಚ್ ಗಳ ವೇಳೆ BMTC ಬಸ್ ಗಳ ವಿಶೇಷ ಕಾರ್ಯಚರಣೆ ನಡೆಯಲಿದೆ. ಪಂದ್ಯದ ವೇಳೆ ಬಂದು ಹೋಗುವ ಎರಡೂ ಅವಧಿಯಲ್ಲೂ ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ನಗರದ ವಿವಿಧ ಭಾಗಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.
ಎಲ್ಲಿಂದ ಎಲ್ಲಿಗೆ ಬಸ್ ಸೇವೆ ಇರಲಿದೆ?
- SBS-1ಕೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿಬಸ್ ನಿಲ್ದಾಣ (ಹೆಚ್.ಎ.ಎಲ್‌ರಸ್ತೆ)
- ಚಿನ್ನಸ್ವಾಮಿ – ಜಿ-2 ಸರ್ಜಾಪುರ
- ಜಿ-3 ಎಲೆಕ್ಟ್ರಾನಿಕ್ ಸಿಟಿ (ಹೊಸೂರುರಸ್ತೆ)
- ಜಿ-4 ಬನ್ನೇರುಘಟ್ಟ ಮೃಗಾಲಯ
- ಜಿ-7- ಜನಪ್ರಿಯ ಟೌನ್‌ಷಿಪ್ (ಮಾಗಡಿ ರಸ್ತೆ)
- ಜಿ-10 ಆರ್.ಕೆ. ಹೆಗಡೆ ನಗರ ಯಲಹಂಕ (ನಾಗವಾರ, ಟ್ಯಾನರಿ ರಸ್ತೆ)
- 317 ಜಿ ಹೊಸಕೋಟೆ
- 13 ಬನಶಂಕರಿ