ಬೆಂಗಳೂರು : ಕಮರ್ಷಿಯಲ್ ಸಿಲಿಂಡರ್‌ಗಳ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಸಚಿವ ಕೆಎಚ್ ಮುನಿಯಪ್ಪ ಅವರು ಇಂದು ಸಿಲಿಂಡರ್ ವಿತರಣಾ ಸಂಸ್ಥೆಗಳ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಕೇಂದ್ರದಿಂದ ಪ್ರತಿನಿತ್ಯ ರಾಜ್ಯಕ್ಕೆ 10 ಸಾವಿರ ಸಿಲಿಂಡರ್ ಪೂರೈಕೆ ಆಗಲಿದೆ ಎಂದು ತಿಳಿಸಿದ್ದಾರೆ.
IOC, HP, GALL, ಭಾರತ್ ಪೆಟ್ರೋಲಿಯಂ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು. ಆಹಾರ ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ಸಭೆ ನಡೆಸಲಾಗಿದೆ. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಹಾರ ಸಚಿವರು, ಕಮರ್ಷಿಯಲ್ ಸಿಲಿಂಡರ್‌ಗಾಗಿ ಬಳಕೆದಾರರು ಗೇಲ್ ಕಂಪನಿಯಲ್ಲಿ ಒಂದು ವಾರದೊಳಗೆ ರಿಜಿಸ್ಟರ್ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕೇಂದ್ರ ನೀಡುತ್ತಿದ್ದ 9000 ಸಿಲಿಂಡರ್‌ಗಳ ಸಂಖ್ಯೆಯಲ್ಲಿ ಏರಿಕೆ ಮಾಡಿದ್ದು, ರಾಜ್ಯಕ್ಕೆ 10,000 ಸಿಲಿಂಡರ್ ನೀಡಲಿದೆ. ವಿನಾಕಾರಣ ಗ್ಯಾಸ್ ಡಿಸ್ಟ್ರಿಬ್ಯೂಟರ್‌ಗಳ ಮೇಲೆ ಯಾರು ಒತ್ತಡ ಹೇರಬಾರದು. ಬಂದಿರುವ ಸಮಸ್ಯೆಯನ್ನು ಎಲ್ಲರೂ ಜೊತೆಗೂಡಿ ಸಹಕರಿಸಿದರೆ ಬಗೆಹರಿಯುತ್ತದೆ ಎಂದು ಸಚಿವ ಕೆಎಚ್ ಮುನಿಯಪ್ಪ ಮನವಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಿಲಿಂಡರ ಭಾವದ ಕುರಿತು ಕೇಂದ್ರಕ್ಕೆ ಎರಡನೇ ಪತ್ರ ಬರೆದ ಬಳಿಕ ಇದೀಗ ಕೇಂದ್ರ ಸರ್ಕಾರ ಸ್ಪಂದನೆ ನೀಡಿದ್ದು, ಇದುವರೆಗೂ 9,000 ಸಿಲಿಂಡರ್ ಪರೋಕೆ ಮಾಡುತ್ತಿದ್ದು ಇದೀಗ ಹೆಚ್ಚುವರಿ 20% ಸಿಲಿಂಡರ್ ಕೊಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹಾಗಾಗಿ ನಿತ್ಯ ರಾಜ್ಯಕ್ಕೆ 10,000 ಕಮರ್ಷಿಯಲ್ ಸಿಲಿಂಡರ್ ಸಿಗುತ್ತೆ ಮುಂದಿನ ಸೋಮವಾರ ನಾವು ಮತ್ತೊಮ್ಮೆ ಸಭೆ ಸೇರುತ್ತೇವೆ. ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ಗೆ 25 ದಿನ ಅವಕಾಶ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : 786 ನಂಬರನ್ನೇ ವಂಚನೆಗೆ ಬಳಸಿಕೊಂಡ ಸೈಬರ್ ಚೋರರು


















