ಬೆಂಗಳೂರು : ಉನ್ನತ ಶಿಕ್ಷಣ ಇಲಾಖೆಯು ರಾಜ್ಯದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಬೆಂಗಳೂರಲ್ಲಿ ಶೀಘ್ರದಲ್ಲೇ ಹೈಟೆಕ್ ಯೂನಿವರ್ಸಿಟಿ ಶುರುವಾಗಲಿದೆ ಎಂದು ಸಿಹಿ ಸಂದೇಶವೊಂದನ್ನು ನೀಡಿದೆ.
ಯೂನಿವರ್ಸಿಟಿ ಆಫ್ ಲ್ಯಾನ್ಸೆಸ್ಟರ್, ಬೆಂಗಳೂರಲ್ಲಿ ಆರಂಭಿಸಲು ತಯಾರಿಯಾಗುತ್ತಿದ್ದು, ವಿದೇಶಗಳಲ್ಲಿರುವಂತೆ ಇನ್‌ಫ್ರಾಸ್ಟ್ರಕ್ಚರ್, ಕ್ಲಾಸ್‌ರೂಂಗಳು ಇರುವಂತೆ ಈಗಾಗಲೇ ಸರ್ಕಾರದ ವತಿಯಿಂದ ಚರ್ಚೆ ನಡೆದಿದೆ. ಉನ್ನತ ತಂತ್ರಜ್ಞಾನಗಳ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಗುರಿ ಹೊಂದಿದೆ. ಇಷ್ಟೆ ಅಲ್ಲದೇ ರಾಜ್ಯದ ಐದು ವಿದ್ಯಾರ್ಥಿನಿಯರಿಗೆ ವಿದೇಶದಲ್ಲಿ ಕಲಿಕೆಗೆ ಅವಕಾಶ ನೀಡಲಾಗುತ್ತದೆ.
ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ಗುಡ್‌ನ್ಯೂಸ್
ಫಾರಿನ್ ಕಾಮನ್‌ವೆಲ್ತ್ ಆಫೀಸ್ ಮುಖಾಂತರ ಒಡಂಬಡಿಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ಮೆರಿಟ್ ವಿದ್ಯಾರ್ಥಿನಿಯರಿಗೆ ಫಾರಿನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅವಕಾಶ ನೀಡಿದೆ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ. ಇಲ್ಲಿ ಪ್ರತಿವರ್ಷ ರಾಜ್ಯದ 5 ವಿದ್ಯಾರ್ಥಿನಿಯರಿಗೆ ಅವಕಾಶ ಸಿಗುತ್ತದೆ. ಯಾವುದೇ ಸ್ನಾತಕೋತ್ತರ ಪದವಿಯನ್ನಾದರೂ ವಿದೇಶದಲ್ಲಿ ಶಿಕ್ಷಣ ಪಡೆಯಬಹುದು. ಪ್ರತಿ ವಿದ್ಯಾರ್ಥಿನಿಯರಿಗೆ 20 ಲಕ್ಷ ವೆಚ್ಚವನ್ನು ರಾಜ್ಯ ಸರ್ಕಾರ ಬರಿಸಲಿದೆ.