ಬೆಂಗಳೂರು: ಬಿಬಿಎಪಿಂಪಿಯಿಂದ(BBMP) ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಇ ಖಾತಾ ಪಡೆಯಲು ಮೇಳ ಆಯೋಜಿಸಲಾಗಿದೆ.
ನಾಗರಿಕರ ಅನುಕೂಲಕ್ಕಾಗಿ ಇ ಖಾತಾ ಮೇಳ(E Khata Mela) ಆಯೋಜಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ. ನಗರದಲ್ಲಿ ಇ-ಖಾತಾ ವಿತರಣೆಯನ್ನು ಮತ್ತುಷ್ಟು ಸರಳೀಕರಣಗೊಳಿಸುವ ಉದ್ದೇಶದಿಂದ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಗಳ ಸಹಯೋಗದಲ್ಲಿ ಇ-ಖಾತಾ ಮೇಳ ಆಯೋಜಿಸಲಾಗಿದೆ.
ಹೀಗಾಗಿ ಇ ಖಾತಾ ಪಡೆಯಲು ಬಿಬಿಎಂಪಿಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಆಸಕ್ತ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಟನೆಯ ಪದಾಧಿಕಾರಿಗಳನ್ನು ಭೇಟಿ ಮಾಡಿ ವಾಟ್ಸಾಪ್ ಗ್ರೂಪ್ ರಚನೆ ಮಾಡಬೇಕು.ಅಪಾರ್ಟ್ ಮೆಂಟ್ ಹಾಗೂ ಲೇಔಟ್ ನ ನಾಗರಿಕರನ್ನು ಗ್ರೂಪ್ ಗೆ ಸೇರಿಸಬೇಕು. ಆ ಬಳಿಕ ಕರಡು ಇ ಖಾತಾ ಪಡೆಯುವುದಕ್ಕೆ ಬೇಕಾದ ಪ್ರಾಥಮಿಕ ಮಾಹಿತಿ ಪಡೆಯಬೇಕು.10 ರಿಂದ 15 ದಿನಗಳ ನಂತರ ಎಲ್ಲರಿಗೂ ಅನುಕೂಲವಾಗುವ ದಿನ ಹಾಗೂ ಸ್ಥಳದಲ್ಲಿ ಇ-ಖಾತಾ ಮೇಳ ಆಯೋಜಿಸಬೇಕು ಎಂದು ಸೂಚಿಸಲಾಗಿದೆ.
ಯಾವುದೇ ಕಾರಣಕ್ಕೂ ಆಧಾರ್ ಒಟಿಪಿ, ಆಸ್ತಿಯ ದಸ್ತಾವೇಜು,(Property documentation) ಕಟ್ಟಡ ಅಥವಾ ಪ್ಲಾಟ್ ಫೋಟೋ, ವಿದ್ಯುತ್ ಬಿಲ್ ಸಂಖ್ಯೆ(Electricity Bill No), ಖಾತಾ ಪ್ರಮಾಣ ಪತ್ರವನ್ನು(Certificate of Account) ವಾಟ್ಸಾಪ್ ಗ್ರೂಪ್ ನಲ್ಲಿ ಹಾಕದಂತೆ ಸೂಚನೆ ನೀಡಲಾಗಿದೆ. ಮೇಳಕ್ಕೆ ಅಗತ್ಯವಿರುವ ಕಂಪ್ಯೂಟರ್, ಇಂಟರ್‌ನೆಟ್ ವ್ಯವಸ್ಥೆ, ಪ್ರಿಂಟರ್, ಸಿಬ್ಬಂದಿ ವ್ಯವಸ್ಥೆ ಮಾಡಿಕೊಳ್ಳಬೇಕು. ಟೋಕನ್ ವ್ಯವಸ್ಥೆ ಮಾಡಿಕೊಂಡು ಖಾತಾ ಅರ್ಜಿ ಸಲ್ಲಿಸುವಂತೆ ಮಾಡಬೇಕು. ಇ ಖಾತಾ ಪಡೆಯುವುದಕ್ಕೆ ಮಾಲೀಕರಿಗೆ ಋುಣಭಾರ ಪ್ರಮಾಣ ಪತ್ರ (ಇಸಿ) ಅಗತ್ಯವಿಲ್ಲ ಎಂದು ಬಿಬಿಎಂಪಿ ಸೂಚಿಸಿದೆ.