ಬೆಂಗಳೂರು: ಸಿಲಿಕಾನ್ ಸಿಟಿಯ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ ವೊಂದು ಸಿಕ್ಕಿದೆ.
ಬಿಬಿಎಂಪಿಯು ಮನೆ ಬಾಗಿಲಿಗೆ ಇ ಖಾತ ವಿತರಣೆ ಸ್ಕೀಮ್ ಜಾರಿ ಮಾಡಿದ್ದು, ಮನೆ ಮಾಲೀಕರು ಸಂತಸ ಪಡುವಂತಾಗಿದೆ. ಇ ಖಾತಾಗೆ ಅಪ್ಲೈ ಮಾಡುದ ಅಸ್ತಿ ಮಾಲೀಕರ ಮನೆ ಬಾಗಿಲಿಗೆ ಖಾತಾ ವಿತರಣೆ ಮಾಡುವ ಹೊಸ ಯೋಜನೆಯನ್ನು ಬಿಬಿಎಂಪಿ ಕಂದಾಯ ವಿಭಾಗದಿಂದ ಜಾರಿಗೆ ತರಲಾಗುತ್ತಿದೆ.
ಕಳೆದ 6 ತಿಂಗಳಿಂದ ಲಕ್ಷಾಂತರ ಆಸ್ತಿ ಮಾಲೀಕರು ಬಿಬಿಎಂಪಿ ವ್ಯಾಪ್ತಿಯಲ್ಲಿ ಇ ಖಾತಾಗೆ ಅಪ್ಲೈ ಮಾಡಿದ್ದಾರೆ. ಆದರೆ, ಇಲ್ಲಿಯವರೆಗೆ ಕೆಲವರಿಗೆ ಮಾತ್ರ ಕರಡು ಇ ಖಾತಾ ಸಿಕ್ಕಿದೆ. ಇಲ್ಲಿಯವರೆಗೆ ಸುಮಾರು 11 ಲಕ್ಷ ಕಟ್ಟಡ ಮಾಲೀಕರು ಇ ಖಾತಾಗೆ ಅಪ್ಲೈ ಮಾಡಿದ್ದಾರೆ. ಆದರೆ, ಈ ಪೈಕಿ ಕೇವಲ 1.5 ಲಕ್ಷ ಆಸ್ತಿ ಮಾಲೀಕರಿಗೆ ಮಾತ್ರ ಇ ಖಾತಾ ಸಿಕ್ಕಿದೆ. ಹೀಗಾಗಿ ಹಲವರು ಪ್ರತಿ ದಿನ ಕಂದಾಯ ಕಚೇರಿಗೆ ಅಲೆದು ಅಲೆದು ಸುಸ್ತಾಗುತ್ತಿದ್ದಾರೆ.
ಈ ಬಗ್ಗೆ ಅಯುಕ್ತರಿಗೆ ಕೂಡ ಅನೇಕ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಇ ಖಾತಾವನ್ನು ಕಟ್ಟಡ ಮಾಲೀಕರ ಮನೆಗೆ ತಲುಪಿಸಲು ನಿರ್ಧರಿಸಲಾಗಿದೆ. ಈ ವಾರದಲ್ಲೇ ಈ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ.